ಮೀನುಗಳ ಮಾತುಕತೆ ಜೋರಾಗಿದೆ. ನಾನು ಅವುಗಳ ಮಾತನ್ನ ಕದ್ದು ಕೇಳಿಸಿಕೊಳ್ತಾ ಇದ್ದೇನೆ ಅನ್ನೋದನ್ನ ಮರೆತು ಜೋರಾಗಿ ಮಾತಾಡುತ್ತಿದ್ದವು. ಮಾತುಕತೆ ಹೀಗೆ ಮುಂದುವರೆದಿತ್ತು. ಬೂತಾಯಿ ಮೀನು ಅಂಜಲ್ ಮೀನಿನ ಬಳಿ ಅಲ್ಲೋ ನಿನಗ್ಯಾಕೆ ಅಷ್ಟು ಬೆಲೆ? ನನಗೆ ಬೆಲೆನೇ ಇಲ್ಲ. ನಿನ್ನನ್ನ ಎಲ್ಲರೂ ಅಷ್ಟು ಸುಲಭವಾಗಿ ಖರೀದಿಸುವುದಕ್ಕೆ ಬರುವುದು ಇಲ್ಲ ನಾನು ಎಲ್ಲರ ಕೈಗೆ ತುಂಬಾ ಸುಲಭವಾಗಿ ಸಿಕ್ಕಿ ಬಿಡುತ್ತೇನೆ. ಆದರೆ ನನಗೇನು ಅಷ್ಟು ಹೆಚ್ಚಿನ ಬೆಲೆ ಕೂಡ ಇಲ್ಲ ಅದಕ್ಕೆ ಅಂಜಲ್ ಮೀನು ಹೇಳಿದ್ದು ನೋಡು ನಾನು ಅವರ ಕೈಗೆ ಅಷ್ಟು ಸುಲಭವಾಗಿ ಸಿಗದೇ ಇರುವ ಕಾರಣಕ್ಕೆ ನನಗೆ ಬೆಲೆ ಹೆಚ್ಚಿರುವುದು, ನೀನು ಅವರಿಗೆ ದಾರಾಳವಾಗಿ ವಿಪರೀತ ಸಿಕ್ತಾ ಇದ್ದೀಯಾ ಆ ಕಾರಣಕ್ಕೆ ನಿನ್ನ ಬೆಲೆ ಕಡಿಮೆ. ಇಲ್ಲಿ ನಾವು ಯಾರ ಕೈಗೆ ಎಷ್ಟು ಸಿಕ್ತೀವಿ ಅನ್ನೋದು ಮುಖ್ಯ ನಾನು ನಿನ್ನ ಹಾಗೆ ದೊರಕಿದ್ದಿದ್ರೆ ನನಗೂ ಬೆಲೆನೇ ಇರುತ್ತಿರಲಿಲ್ಲ.ಅದಲ್ಲದೆ ನಾನು ಬದುಕೋದು ಆಳ ಸಮುದ್ರದಲ್ಲಿ. ಬದುಕಿನಲ್ಲೂ ಹೆಚ್ಚು ಆಳಕ್ಕೆ ಇಳಿದಾಗ ಬೆಲೆ ಹೆಚ್ಚಿರುತ್ತದೆ. ನಮ್ಮ ಬೆಲೆಯನ್ನು ನಾವೇ ನಿರ್ಧರಿಸಿಕೊಳ್ಳುವುದು. ಮೀನುಗಳು ಮೌನವಾದವು. ನನಗಂತೂ ಒಳ್ಳೇ ಪಾಠ ಸಿಕ್ತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!