ಸಂಜೀವ ಇದರ ಬಗ್ಗೆ ಅಷ್ಟಾಗಿ ಯೋಚನೆ ಮಾಡಿದವನಲ್ಲ. ಆತನು ಮೊದಲಿನಿಂದಲೂ ಹಾಗೆ ಮನೆ ಮುಂದೆ ನಾಯಿ ಬೆಕ್ಕು ಓಡಾಡ್ತಾ ಇದ್ರೆ ಕಲ್ಲು ಬಿಸಾಡುವುದು ಕೋಲಲ್ಲಿ ಹೊಡೆಯುವುದು ಮಾಡುತ್ತಾನೆ. ಸಣ್ಣ ನಾಯಿಯ ಮರಿಗಳು ಮನೆಯಲ್ಲಿ ಏನಾದರೂ ಇದ್ದರೆ ಅದನ್ನ ಹಿಡಿದು ನದಿಗೋ ಕೆರೆಗೂ ಎಸೆದು ಬರ್ತಾ ಇದ್ದ. ಮನೆಯಲ್ಲಿ ನಂಬುವ ದೈವ ದೇವರುಗಳನ್ನು ಗಂಟು ಕಟ್ಟಿ ಮನೆಯ ಒಂದು ಮೂಲೆಯಲ್ಲಿ ತುಂಬಿಸಿಟ್ಟಿದ್ದ. ಎಲ್ಲವೂ ಅವನಿಗೆ ಇಷ್ಟದಂತೆ ಮಾಡುತ್ತಿದ್ದ ಮನೆಯವರು ಬೇಡವೆಂದರೂ ಆತ ಅವರ ಯಾರ ಮಾತನ್ನು ಕೇಳಿದವನಲ್ಲ. ಆತನಿಗೆ ಅದರಿಂದ ಯಾವ ಸಮಸ್ಯೆ ಆಗದೆ ಅಹಂಕಾರದಲ್ಲಿ ಬದುಕ್ತಾ ಇದ್ದ. ಕಾಲ ತುಂಬಾ ವೇಗವಾಗಿ ಓಡ್ತಾಹೋಯ್ತು ಮದುವೆಯಾಗಿ ಗಂಡನ ಮನೆಯಲ್ಲಿ ಬದುಕಬೇಕಾದ ಮಗಳು ಮನೆಯಲ್ಲಿ ಉಳಿದುಬಿಟ್ಟಳು, ನೆಮ್ಮದಿಯ ಬದುಕನ್ನ ಕಂಡುಕೊಂಡಿದ್ದ ಮಗ ಆಸ್ಪತ್ರೆ ಸೇರಬೇಕಾಯಿತು ಜೀವನದ ಎಲ್ಲಾ ನೆನಪುಗಳನ್ನು ಕಳೆದುಕೊಂಡು ಪುಟ್ಟ ಮಗುವಿನಂತೆ ಬಾಡಿಗೆ ಕೋಣೆಯಲ್ಲಿ ಬದುಕುವಂತಾಯ್ತು, ಈಗ ಸಂಜೀವ ತಾನು ಮಾಡಬಾರದ ಕೆಲಸಗಳನ್ನು ಮಾಡಿದ್ದಕ್ಕೆ ಹೀಗಾಗಿದೆ ಅಂತ ಕೊರಗ್ತಾ ಇದ್ದಾನೆ ನೋವು ನೀಡಿದ್ದಕ್ಕೆ ತನಗೂ ನೋವು ಸಿಕ್ಕಿರುವುದಕ್ಕೆ ಪ್ರತಿದಿನ ಅಳುತ್ತಾ ಇದ್ದಾನೆ. ಈಗ ಎಲ್ಲರಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದಾನೆ ಕರ್ಮಫಲ ನಮ್ಮನ್ನು ಹುಡುಕಿ ಬರುತ್ತೆ ಹಾಗಾಗಿ ಹೆಜ್ಜೆ ಇಡುವಾಗ ಜಾಗೃತೆ ಅಂತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ