ಕಿವಿ
ಚುಚ್ಚುವರ
ನಡುವೆ
ನೀ
ಮೌನಿಯಾಗಿರು !
*
ಕೆಲವರದ್ದು
ಹೀಗೆಯೇ
ಅಸಂಬದ್ಧ
ಪ್ರಲಾಪ
ದ
ಜೊತೆಗೆ
ಪ್ರತಾಪ !
*
ಬರೆ
ಎಲ್ಲರೊಡನೆ
ಬೆರೆ !
*
ಒಬ್ಬನ (ಳ)
ಜೊತೆಗೆ
ಬಾಳು
ಇಬ್ಬರ
ಸ್ನೇಹ
ಮಾಡು !
*
ಕನಸು
ನನಸಾಗಲಿ
ಆದರೆ
ಹೊಲಸಾಗದಿರಲಿ !
*
ಹಠ
ಸ್ವಭಾವದ
ಮನುಷ್ಯ
ಯಾವತ್ತೂ
ಪರೋಪಕಾರಿ
ಆಗಿರುತ್ತಾನೆ,
ಜೊತೆಗೆ ಯಾವ
ಉಪದ್ರವನ್ನೂ
ಮಾಡುವುದಿಲ್ಲ !
*
ತಾವೂ
ಬರಹಗಾರರೆಂಬ
ಜೂಜುಕೋರರ
ಸಂತೆಯಲ್ಲಿ
ಸಾಹಿತ್ಯ
ಕಳೆದು ಹೋಗಿದೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!