ಮಾತು ಮುರಿಯಲಿಲ್ಲ ಹೊರಗೆಂದೂ ಬೇಡಿಯೇ ಬದುಕಿದ
ಸೋತು ಹೋಗಲಿಲ್ಲ ಮುಂದೆಯೂ ನೋಡಿಯೇ ಬದುಕಿದ
ಬಾಳು ಕರಗಲಿಲ್ಲ ಎನ್ನುತ್ತಾ ನಡೆಯುತ್ತಲೇ ಹೋದನೆ
ದಾಳ ಕದಲಲಿಲ್ಲ ಸನಿಹದಲೆಂದೂ ಆಡಿಯೇ ಬದುಕಿದ
ಜಾಲು ಕಾಣಲಿಲ್ಲವೇ ಬುವಿಯಲಿಂದು ಕಂಬನಿಯು ಜಾರದೆ
ಮೇಲೆ ಬೀಳಲಿಲ್ಲವೆಂದೂ ಜೀವನದಲ್ಲಿ ಓಡಿಯೇ ಬದುಕಿದ
ನೂಲು ಹರಿಯಿತೆಂದು ಸಿಟ್ಟನೆಂದೂ ಮಾಡಲಿಲ್ಲ ಬಟ್ಟೆಯು
ಶಾಲು ಹಾಕಿರದಿದ್ದರೂ ಅವನು *ಹಾಡಿಯೇ ಬದುಕಿದ
ಕಾಲು ಹಿಡಿಯಲಿಲ್ಲವೆಂದು ಹೇಳುವವರು ಬರುವರೇ ಈಶಾ
ಸಾಲ ಸಾಯಲಿಲ್ಲವೆಂದು ಯಾವತ್ತೂ ಬಾಡಿಯೇ ಬದುಕಿದ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!