ಡಾಕ್ಟರ್ ಅವನ ಕೈ ಹಿಡಿದು ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದರು. ಇಡೀ ದೇಹವನ್ನ ಎಷ್ಟೇ ಸಲ ಪರೀಕ್ಷಿಸಿದರೂ ಕೂಡ ಯಾವುದೊಂದು ರೋಗದ ಲಕ್ಷಣವೂ ಕಾಣಲೇ ಇಲ್ಲ. ಮನೆಯವರಿಗೆ ವಿಪರೀತ ಯೋಚನೆ ಆತ ಆಗಾಗ ಮೌನವಾಗ್ತಾನೆ ಮುಖ ಕಳಾಹೀನವಾಗುತ್ತೆ, ದೇಹದ ಆರೋಗ್ಯ ಕೆಡುತ್ತಾ ಹೋಗುತ್ತೆ, ಡಾಕ್ಟರ್ ಅವನ ಬಳಿ ಒಂದು ಗಂಟೆಗಳ ಕಾಲ ಸುಮ್ಮನೆ ಮಾತನಾಡುವುದಕ್ಕೆ ಪ್ರಾರಂಭ ಮಾಡಿದರು. ಒಂದು ಗಂಟೆ ನಂತರ ಡಾಕ್ಟರಿಗೆ ಅವನ ಸ್ಥಿತಿ ಅರ್ಥವಾಗಿತ್ತು. ಆತನಿಗೆ ಸಮಾಜದ ಮುಂದೆ ಕಾಣಿಸಿಕೊಳ್ಳುವ ಆಸೆ ಪ್ರತಿದಿನ ಮೊಬೈಲ್ ನ ಒಳಗೆ ವಿವಿಧ ಜನರ ವಿವಿಧ ರೀತಿಯ ಅಬ್ಬರಗಳನ್ನ, ದಿನಚರಿಯನ್ನ ಎಲ್ಲವನ್ನು ಗಮನಿಸುತ್ತಾನೆ. ತಾನು ಹಾಗಾಗಬೇಕು ಅಂತ ಅಂದುಕೊಳ್ಳುತ್ತಾನೆ ಅದಕ್ಕೋಸ್ಕರ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನವನ್ನು ಪಡ್ತಾ ಇದ್ದಾನೆ ಆದರೆ ಎಲ್ಲೂ ಕೂಡ ಜನ ಅದನ್ನ ಗುರುತಿಸಲಿಲ್ಲ ಗಮನಿಸಲಿಲ್ಲ ಹಾಗಾಗಿ ನೋವಿಗೆ ಜಾರಿದ್ದಾನೆ ಬೇಸರಿಸಿಕೊಂಡಿದ್ದಾನೆ ತನ್ನಿಂದ ಸಮಾಜಕ್ಕೆ ಉಪಯೋಗ ಇಲ್ಲ, ಯಾವುದೇ ಬೆಲೆ ಇಲ್ಲ ಅಂದುಕೊಂಡಿದ್ದಾನೆ ತನ್ನ ಬದುಕು ವ್ಯರ್ಥ ಹೀಗೆಂದುಕೊಂಡು ಮೌನಕ್ಕೆ ಜಾರಿದ್ದಾನೆ. ಹಾಗಾಗಿ ರೋಗಗಳು ಅವನನ್ನ ಹುಡುಕಿಕೊಂಡು ಬಂದಿವೆ. ಇದನ್ನ ಅವನಿಗೆ ಅರ್ಥ ಮಾಡಿಸುವುದಕ್ಕೆ ಮತ್ತೆ ಡಾಕ್ಟರಿಗೆ ಸಮಯ ಬೇಕಾಯಿತು. ಆತ ಅರ್ಥ ಮಾಡಿಕೊಂಡಂತೆ ಅನ್ನಿಸಿತು, ಡಾಕ್ಟರ್ ಗೆ ಅರ್ಥವಾಗಿತ್ತು, ಇದೇ ಆಸ್ಪತ್ರೆಯೊಳಗೆ ಕಾಲಿಡುವ ಹಲವರಿಗೆ ಬಾಹ್ಯ ದೇಹಕ್ಕಿಂತ ಅಂತರ್ಯದ ಮನಸೊಳಗೆ ಸಮಸ್ಯೆಗಳ ರಾಶಿ ಹೆಚ್ಚಿದೆ ಅದಕ್ಕೆ ಪರಿಹಾರ ಕಂಡುಕೊಂಡರೆ ಬಾಹ್ಯ ಸಮಸ್ಯೆಗಳೆಲ್ಲವೂ ನನ್ನಿಂದ ತಾನಾಗೆ ಕಡಿಮೆಯಾಗುತ್ತದೆ ಅಂತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!