ಈಗೀಗ
ಮನುಷ್ಯರು ಕಲಿತಂತೆ
ಬಲಿತಂತೇ
ಸಮಾಜದಲ್ಲಿ
ಕುಬ್ಜರಾಗುತ್ತಿದ್ದಾರೆ !
*
ಬದುಕಿಗಾಗಿ
ಕಲಿತಿರುವ
ಜನ
ಹಸಿವಿನಿಂದ
ಒದ್ದಾಡುತ್ತಿದ್ದಾರೆ !
*
ವಾತಾವರಣವೇ
ವಿಷಮಯ
ಆಗಿರುವಾಗ
ಜನರ
ಹೃದಯ
ಅಘಾತವಾಗದೆ
ಇದ್ದೀತೆ !
*
ಕವಿಯ ಪದ್ಯ
ಪೆಪ್ಪರ್ ಮಿಂಟ್, ಅಂತೆ
ಸವಿಯ ಬೇಕು !
*
ಕೋಣೆಯೊಳಗೆ
ಬಳೆಯ ಸದ್ದಾಗಲು ,
ಹೊಸತು ಹುಟ್ಟು !
*
ದುಃಖದಲ್ಲಿಯೂ
ಮೈಮನ ಅರಳುತ್ತವೆ
ಮತ್ತೆ ನಕ್ಕಾಗ !
*
ಕೋಟಿ
ಕೋಟುಗಳ
ಕಳೆದು
ಊರೂರು ತಿರುಗಿ
ಒಂದು ನೆಲೆಯಲ್ಲಿದ್ದೇನೆ
ಎನ್ನುವಾಗಲೇ
ಕಾಯಿಲೆ
ನಾನಿದ್ದೇನೆಯೆಂದು
ಹೆಗಲಿಗೆ ಕೈ ಹಾಕಿದಂತೆ ?
ಈ ಬದುಕು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!