ಒಲುಮೆ ಇರದ ಮುತ್ತಿನಲ್ಲಿ, ಏನು ಫಲವೋ ಕಾಣೆನು

ಪ್ರೀತಿ ತಪ್ಪೆ ತನುವಿನಲ್ಲಿ, ಏನು ಬಲವೋ ಕಾಣೆನು

 

ಜಾತಿ ಪಂಥ ಇರುವ ಹೊತ್ತು,  ಸವಿಯು ಇಹುದೆ ಬಾಳಲಿ

ಕರುಣೆ ಇರದ ಜನರ ನಡುವೆ, ಏನು ಒಲವೋ ಕಾಣೆನು

 

ಬಾವಿ ಒಳಗೆ ಜಂತುವಂತೆ, ಕೂಗಿ ಕರೆವೆ ಏತಕೆ

ಕನಸು ಕಳೆದು ನನಸು ಇರದೆ, ಏನು ಛಲವೋ ಕಾಣೆನು

 

ಮನಸಿನೊಳಗೆ ನೀತಿ ಇಹದೆ, ನಮ್ಮ ನಿಮ್ಮ ಜೊತೆಯಲಿ

ನಾನೆ ಎನುವ ಅಹಂ ಒಳಗೆ, ಏನು ಕುಲವೋ ಕಾಣೆನು

 

ಭವದ ಸುತ್ತ ಬೇಲಿ ಇರದೆ, ನಡತೆ ಬರಡು ಈಶಾ

ಬಿಟ್ಟಿ ಭಾಗ್ಯ ಬೆಳಕು ಬರದೆ, ಏನು ಸೆಲವೋ ಕಾಣೆನು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ