ಹೇಗಿದೆ ಸಾವಿನ ತಯಾರಿ, ದಿನಾಂಕವನ್ನಂತು ನಿಗದಿ ಮಾಡಿಸಿಕೊಂಡಿದ್ದೀರಿ. ಅದರ ನಂತರದ ಕಾರ್ಯಕ್ರಮಗಳು ಹೇಗಿರುತ್ತೋ ನಮಗಂತೂ ಗೊತ್ತಿಲ್ಲ, ಹೇಗಿರಬೇಕು ಅನ್ನುವ ನಿರ್ಧಾರವನ್ನು ನಾವು ಮಾಡುವ ಹಾಗಿಲ್ಲ ಸಾಯುವುದಕ್ಕಿಂತ ಮೊದಲು ಬದುಕು ಹೇಗೆ ಅನ್ನೋದನ್ನ ನಿರ್ಧರಿಸಬಹುದು. ಹಾ ಹೇಳುವುದನ್ನು ಮರೆತಿದ್ದೆ ನಿನ್ನೆ ನೂರು ವರ್ಷ ಬದುಕುವುದು ಹೇಗೆ ಅಂತ ಭಾಷಣ ಮಾಡುತ್ತಿದ್ದವರು ಎದೆ ಒಡೆದು ಸತ್ತು ಹೋಗಿದ್ದಾರೆ, ಬದುಕಿನ ಬಗ್ಗೆ ಏನು ಆಸೆ ಇಲ್ಲದೆ ಆ ದಿನವನ್ನಷ್ಟೇ ಕಳೆಯುತ್ತಿದ್ದವರು ಇನ್ನು ಕೂಡ ಬದುಕಿದ್ದಾರೆ, ದಾರಿ ಬದಿಯ ಅಪಘಾತಗಳು ಹೆಚ್ಚಾಗ್ತಾ ಇದೆ, ಬದುಕಿನ ಆಸೆಗಳು ಇನ್ನೂ ಹೆಚ್ಚಾಗ್ತಾ ಇದೆ, ನಾವು ಪ್ರತಿದಿನ ಸಾವಿಗೆ ಹತ್ತಿರವಾಗ್ತಾ ಇದ್ದೇವೆ, ಹಾಗಾಗಿ ಈ ದಿನವನ್ನು ಬದುಕಿ ಬಿಡೋಣ ಸಾವಿರದಲ್ಲಿ ಇರುವವರು ಲಕ್ಷದ ಬಗ್ಗೆ ಚಿಂತಿಸೋದು ಬೇಡ, ಮತ್ತೊಂದು ಹೇಳೋದನ್ನ ಮರೆತಿದ್ದೆ ತುಂಬಾ ಜನ ಚಿಂತೆಯಿಂದ ಸಾವನ್ನ ಬೇಗ ಬೇಗ ಕರೆಸಿಕೊಳ್ಳುತ್ತಿದ್ದಾರೆ, ಸತ್ತ ಮೇಲೆ ಮತ್ತೆ ಭೇಟಿಯಾಗೋದಕ್ಕೆ ಸಾಧ್ಯವಾಗುವುದಿಲ್ಲ ಬದುಕಿದ್ದಾಗ ಮಾತಾಡೋಣ ಖುಷಿಯಾಗಿರೋಣ ಚೆನ್ನಾಗಿರೋಣ ನಗ್ತಾ ಇರೋಣ ಇನ್ನೇನ್ ಹೇಳೋದು ಬದುಕಿದ್ರೆ ನಾಳೆ ಸಿಗೋಣ ಹೀಗೆಂದ ಮನೋಜ ಓಡಿ ಬಿಟ್ಟ. ಮೊದಲೆಲ್ಲ ಅವನು ಹಾಗಿರಲಿಲ್ಲ, ಒಂದಷ್ಟು ಚಿಂತೆಯಲ್ಲಿ ಇದ್ದವ ಈಗ ಒಮ್ಮಿಂದೊಮ್ಮೆಲೆ ಬದಲಾಗಿದ್ದಾನೆ ಹೇಗೆ ಯಾಕೆ ಅವನಲ್ಲಿಯೇ ಕೇಳಬೇಕು ಕೇಳಿ ಹೇಳ್ತೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!