ಅವನು ಈಗ ಬಂದು ವಾಹಿನಿಯ ಮುಂದೆ ಅಳುತ್ತಿದ್ದಾನೆ. ಅಪ್ಪ ಬದುಕಿರುವಾಗ ದೂರ ಮಾಡಿದ್ದೆ ಅವರಿಗೆ ಪ್ರೀತಿ ಕೊಡಲಿಲ್ಲ ಅವರ ಜೊತೆಗಿದ್ದು ಬದುಕಲಿಲ್ಲ, ನನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದ್ದರು ನಾನು ಅವರ ಕೊನೆಗಾಲದಲ್ಲಿ ಜೊತೆಯಾಗಲಿಲ್ಲ, ಎಂದು. ಅವನಿಗೆ ಹೀಗೆ ಇನ್ನೊಂದಷ್ಟು ಮಾಧ್ಯಮಗಳು ನಿಂತು ಅವನ ಬಗ್ಗೆ ಮಾತನಾಡಬೇಕಿತ್ತು ಅವನಲ್ಲಿ ತಂದೆಯ ಬಗ್ಗೆ ಕೇಳಬೇಕಿತ್ತು, ಅದರಿಂದ ಒಂದಷ್ಟು ಪ್ರಚಾರ ಸಿಗಬೇಕಿತ್ತು ಆ ಕಾರಣಕ್ಕಾಗಿ ತಂದೆಯ ಸಾವನ್ನು ಬಳಸಿಕೊಳ್ಳುತ್ತಿದ್ದಾನೆ. ಬದುಕಿದಷ್ಟು ದಿನ ಕರೆ ಮಾಡದೆ ಆರೋಗ್ಯ ವಿಚಾರಿಸದೆ ಜೊತೆಗೆ ನಿಲ್ಲದೆ ಈಗ ಸಾವಿನ ಮನೆಯಲ್ಲಿ ಸಾವಿರ ನಾಟಕ ಮಾಡಲು ಓಡಿ ಬಂದವನಿದ್ದಾನೆ. ಮೇಲೆ ನಿಂತ ಆತ್ಮ ನೋಡಿ ಸುಮ್ಮನೆ ನಗುತ್ತಿತ್ತು. ಪ್ರಸಿದ್ಧಿ ಸಿಗುತ್ತದೆ ಎಂದಾಗ ಎಲ್ಲಾ ಪ್ರೀತಿಗಳು ತನ್ನಿಂದ ತಾನಗೆ ಹುಟ್ಟಿಕೊಳ್ಳುತ್ತವೆ, ಭಗವಂತ ಮೊದಲೇ ತಿಳಿಸಿ ಬಿಡಬೇಕು ನಾವು ಶಿಕ್ಷಣ ಕೊಟ್ಟು ಬದುಕಿನ ದಾರಿ ತಿಳಿಸುವ ಮಕ್ಕಳು ಮುಂದೆ ಎಲ್ಲಿ ಹೋಗಿ ತಲುಪುತ್ತಾರೆ ಹೇಗೆ ಬದುಕುತ್ತಾರೆ ಎಂದು .ಹಾಗಾಗಿ ಇನ್ನೊಂದಷ್ಟು ಹೊಸ ವಿಚಾರಗಳನ್ನ ತಿಳಿಸಿಕೊಡಬಹುದೇನೋ?

-ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ