ರಾಜೇಶನ ವಾದ ತುಂಬಾ ಜೋರಾಗಿತ್ತು. ನನ್ನ ಮತ್ತು ನನ್ನ ಹೆಂಡತಿಯ ನಡುವೆ ವಾದ ಬರುವುದಕ್ಕೆ ಹೇಗೆ ಸಾಧ್ಯ? ನಾವಿಬ್ರೂ ಒಟ್ಟಿಗೆ ಬದುಕುವುದು ಬೇಡ ಅಂತ ನಿರ್ಧರಿಸುವುದಕ್ಕೆ ಹೇಗೆ ಸಾಧ್ಯ? ಯಾಕೆಂದ್ರೆ ನಮ್ಮ ಮದುವೆಗೆ ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ಖರ್ಚು ಮಾಡಿದ್ವಿ, ಐದು ಸಾವಿರಕ್ಕಿಂತಲೂ ಹೆಚ್ಚು ಜನ ಬಂದಿದ್ದರು, ಬಂದವರಿಗೆಲ್ಲ ಹೊಟ್ಟೆ ತುಂಬಾ ಊಟ ಕೊಟ್ಟಿದ್ವಿ. ರಾಜ್ಯದ ಪ್ರಸಿದ್ಧ ವ್ಯಕ್ತಿಗಳು ನಮ್ಮ ಮದುವೆಗೆ ಬಂದು ಹಾರೈಸಿದ್ರು ಅದ್ಭುತವಾದ ಕ್ಯಾಮರಾಗಳು ನಮ್ಮ ಕಾರ್ಯಕ್ರಮವನ್ನು ಸೆರೆಹಿಡಿದಿದ್ದವು, ರಾಜ್ಯದ ಪ್ರಸಿದ್ದ ಹಾಲ್ ನಲ್ಲಿ ಮದುವೆ ಕಾರ್ಯಕ್ರಮವು ನಡೆದಿತ್ತು, ಮಹಾನ್ ಪಂಡಿತರೊಬ್ಬರು ಮದುವೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಇಷ್ಟೆಲ್ಲ ಸಾಧ್ಯತೆಗಳಿದ್ದಿರುವಾಗ ನಮ್ಮಿಬ್ಬರ ನಡುವೆ ಭೇದಭಾವ ಬರುವುದಕ್ಕೆ ಹೇಗೆ ಸಾಧ್ಯ ಇಲ್ಲಿ ಏನೋ ಮೋಸ ಆಗಿದೆ ಹಾಗಾಗಿ ನಾನಿದಕ್ಕೆ ಪರಿಹಾರವನ್ನು ಹುಡುಕಲೇಬೇಕು ಅಂತ ಆತ ತೀರ್ಮಾನಿಸಿಕೊಂಡು ಕಾರಣಗಳ ಪಟ್ಟಿ ಮಾಡುವುದಕ್ಕೆ ಪ್ರಾರಂಭ ಮಾಡಿದ. ಆತನಿಗೆ ತಮ್ಮಿಬ್ಬರ ನಡುವೆ ಅಡಗಿರುವ ಅಹಂಕಾರ ಅಸೂಯೆ ಸಿಟ್ಟು ತಾನು ಶ್ರೇಷ್ಠ ಅನ್ನುವ ಎಲ್ಲ ಗುಣಗಳು ತುಂಬಿಕೊಂಡಿರುವುದು ಕೊನೆಯವರೆಗೂ ಅರ್ಥವಾಗಲೇ ಇಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!