ನೀಲಿ ಆಕಾಶದೊಟ್ಟಿಂಗೆ 

ಹೊಳೆವ ನಕ್ಷತ್ರ ನೀನೆ

ತಾರೆ ಹಾಂಗೇ ಇಂದು 

ಹತ್ತರೆ ಬಾಯೆನ್ನ ಕೂಸೆ

 

ಜೇನಿನ ಪರಿಮಳದಾಂಗೆ

ಸುತ್ತಲೂ ಇದ್ದರೆ ಹೇಂಗೆ

ನೀ ಹೀಂಗೆ ತಿರುಗುತ್ತಿದ್ದರೆ

ಆನು ಹೇಂಗೆ ತಡೆಯಲಿ ಕೂಸೆ

 

ಕಂಡರೆ ಇಂದೂ ಎನ್ನ

ನೋಡದ್ದೇ ತಿರುಗಿ ಓಡ್ತೆ

ಪ್ರೀತಿ ಹೇಳಿರೇಯೆಂತ

ಗೊಂತಿದ್ದ ನಿನಗೆ ಕೂಸೆ

 

ಪ್ರೇಮದ ಸವಿಯು ನಿನಗಿಲ್ಲೆ

ಪ್ರೀತಿಯಾ ರುಚಿ ಎನಗಿಲ್ಲೆ

ಕೈಯ ಹಿಡ್ಕೊಂಡು ಹೋಪ

ಒಂದಾರಿ ಬಳಿ ಬಾ ಕೂಸೆ

 

ನೀನು ಮುಡ್ಕೊಂಡಾ ಹೂಗು

ನೋಡ್ತಾ ಇತ್ತು ಎನ್ನನ್ನೆ

ಅದರೊಳ ಸೇರಿದ ಕೂಡಲೆ

ಮತ್ತೀಲಿ ತೇಲಿದೆ ಕೂಸೆ

 

ಸಾಕಿನ್ನು ಹೊಗಳ್ವುದ ನಿಲ್ಸು

ಆನು ಬಂದೆ ನೋಡಿಲ್ಲಿ

ಕೊರಳಿಂಗೆ ತಾಳಿಯ ಕಟ್ಟು

ಒಟ್ಟಿಂಗೆ ಬಾಳುವ ಮಾಣಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ