ಯಾರು ಏನು ಹೇಳಿದರೂ ಮೌನವಾಗಿರು

ಬೇಕಾದಷ್ಟು ಹಳಿದರೂ ಮೌನವಾಗಿರು

 

ಸುಮ್ಮನಿದ್ದಷ್ಟೂ  ನೀನೇ ಬೆಳೆಯುವಿ ತಿಳಿಯದೆ

ಶತ್ರುಗಳೆಂದೂ ತಿವಿದರೂ ಮೌನವಾಗಿರು

 

ಪ್ರೋತ್ಸಾಹ ಸಿಗಲಿಲ್ಲವೆಂಬ ಬೇಸರ ಬೇಡ

ಅವಕಾಶ ದಕ್ಕಲಿಲ್ಲವೆಂದರೂ ಮೌನವಾಗಿರು

 

ಬೀದಿಯಲ್ಲಿ ಹೋಗುವರ ಕಡೆ ಗಮನ ಬೇಡವೊ

ಮನೆಯೊಳಗೆ ನೋಡಲಿಲ್ಲವೆಂದರೂ ಮೌನವಾಗಿರು

 

ಬಾನಿನಲ್ಲಿ ಹೊಳೆವ ನಕ್ಷತ್ರ ನೀನಾಗಿರುವೆ ಈಶಾ

ಬರವಣಿಗೆಯು ಸರಿಯಿಲ್ಲವೆಂದರೂ ಮೌನವಾಗಿರು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ