ಹೋ, ನಿನ್ನ ಹತ್ತಿರನೇ ಮಾತಾಡ್ತ ಇರೋದು. ಯಾಕೆ ಎಲ್ಲ ಗೊಂಬೆಗಳ ತರಹ ಆಗಿಬಿಟ್ಟಿದ್ದೀರಾ? ಊರ ಜಾತ್ರೆಗಳಲ್ಲಿ ದೊಡ್ಡ ಮೆರವಣಿಗೆಯಲ್ಲಿ ಗೊಂಬೆಗಳು ಇರಲೇಬೇಕು. ಎಲ್ಲರೂ ಆನಂದಿಸುವವರೇ, ಆ ಗೊಂಬೆಗಳು ಚಲಿಸುವುದ್ದಕ್ಕೆ ಒಳಗಿರುವವರು ಸತತ ಪ್ರಯತ್ನ ಪಡಬೇಕು. ನಿನ್ನ ಜೀವನವೂ ಹಾಗೇ ಇದೆ ತಾನೆ. ಯಾರೋ ನಿನ್ನ ಆಡಿಸಬೇಕು. ನಿನ್ನೊಳಗಿರುವವರು ಆಡಿಸಿದ ಹಾಗೆ ಆಡುತ್ತಾ ಗೊಂಬೆಯ ಹಾಗೆ ಏನೂ ಭಾವ ತೋರಿಸದೆ ಬದುಕೋದು ಯಾಕೆ? ಇನ್ನಾದರೂ ಬದಲಾಗೋ ಮಾರಾಯ? ನಿನಗೆ ಹೇಳ್ತಾ ಇರೋದು ಅರ್ಥ ಮಾಡ್ಕೋ... ಎಚ್ಚರಾಗೋ..ಅವನು ನನ್ನನ್ನ ಮತ್ತೆ ಮತ್ತೆ ಎಬ್ಬಿಸ್ತಾ ಇದ್ದಾನೆ. ಮೈ ಕುಲುಕಿಸಿ ಎಬ್ಬಿಸಿದ್ದಾನೆ, ಎಚ್ಚರಿಸಿದ್ದಾನೆ... ನಾನು ಏಳಲೇ ಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!