ಅನಾಥ ರಸ್ತೆಗಳು ರಾತ್ರಿಯ ಹೊತ್ತು ತಮ್ಮ ಮೇಲೆ ನಡೆದಿರುವ ಕಥೆಗಳನ್ನು ಹೇಳುತ್ತಿವೆ. ತಮ್ಮ ಮೇಲೆ ಹರಿದ ಚಪ್ಪಲಿಗಳನ್ನು ಹಾಕಿ ಬದುಕು ಸಾಗಿಸುವುದಕ್ಕೆ ಕಷ್ಟಪಡುವವರ ಕಥೆಗಳ ಗೂಡುಗಳನ್ನ ಕಟ್ಟಿಕೊಂಡಿದೆ, ಸಂಭ್ರಮದ ಓಟಗಳನ್ನ ನೋಡಿವೆ ,ನೋವಿನ ಭಾರವಾದ ಹೆಜ್ಜೆಗಳನ್ನ ಗಮನಿಸಿವೆ, ಮೋಸದ ನಿಧಾನದ ಹೆಜ್ಜೆಗಳನ್ನ, ಕೋಪದ ಬಿರುಸಾದ ಹೆಜ್ಜೆಗಳನ್ನ, ಕಾಮದ ಮೋಸದ ಹೆಜ್ಜೆಗಳನ್ನ ಎಲ್ಲವನ್ನು ಗಮನಿಸಿದೆ. ಅವುಗಳಿಗೆ ಈ ಹೆಜ್ಜೆಗಳು ಮುಂದೆಲ್ಲಿಗೆ ತಲುಪುತ್ತವೆ ಅನ್ನೋದು ಗೊತ್ತಾಗುತ್ತಿದೆ ಆದರೆ ಸಾಗುತ್ತಿರುವ ಹೆಜ್ಜೆಗಳನ್ನ ದಾರಿ ತಪ್ಪಿಸುವ ಹಾಗಿಲ್ಲ ತಪ್ಪು ಮಾಡಿದವರಿವರೆಂದು ನ್ಯಾಯಾಲಯದ ಮುಂದೆ ಹೇಳುವುದಕ್ಕೆ ಮಾತಿಲ್ಲ, ಒಟ್ಟಿನಲ್ಲಿ ರಸ್ತೆಗೆ ಹೇಳುವುದಕ್ಕೆ ಹಲವಿದ್ದರೂ ಬೆಳಗಿನ ಬಿಡುವಿನಲ್ಲಿ ಮಾತು ಯಾರಿಗೂ ಕೇಳಿಸುತ್ತಿಲ್ಲ, ಕತ್ತಲೆಯ ಮೌನದಲ್ಲಿ ಮಾತನಾಡಬೇಕೆಂದುಕೊಂಡರು ಕೇಳುವ ಕಿವಿಗಳಿಲ್ಲ ಹಾಗಾಗಿ ನೋವಿನಲ್ಲಿದ್ದ ರಸ್ತೆಯ ಜೊತೆಗೆ ಕುಳಿತು ಮಾತನಾಡಿದೆ ಬದುಕಿನ ಅದ್ಭುತ ಅರ್ಥವಾಗಿ ಬಿಟ್ಟಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!