ಇತ್ತೀಚಿಗೆ ನಾನು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಯುಟ್ಯೂಬ್ ಗಳನ್ನು ನೋಡಿದೆ . ಕೆಲವು ಭಾಷಣಗಳು ಅಲ್ಲಿ ಸಿಕ್ಕವು. ಅವರು ಹೇಳುವುದನ್ನು ನಾವು ಒಪ್ಪುವುದು ಬಿಡುವುದು ನಮಗೆ ಸೇರಿದ್ದು, ಆದರೆ ಹೇಳಬೇಕಾದನ್ನು ಸ್ಪಷ್ಟವಾಗಿ ಹೇಳಬೇಕಲ್ಲ? ಅವರು ಏನು ಹೇಳುತ್ತಿದ್ದಾರೆ ಎಂಬುದು ನಮಗೆ ಗೊತ್ತಾಗಬೇಕಲ್ಲ? ಆದರೆ ಅವರು ಸ್ಪಷ್ಟವಾಗಿ ಮಾತನಾಡುತ್ತಿರಲಿಲ್ಲ. ಏನೇನೋ ಮಾತನಾಡುತ್ತಿದ್ದರು. ಆದರೆ ಟಿಪ್ಪಣಿಗಳನ್ನು ಓದಿದಾಗ ಅವುಗಳನ್ನು ಮೆಚ್ಚಿಕೊಂಡವರು ಏನೇನೋ ಕಮೆಂಟ್ ಗಳನ್ನು ಹಾಕಿದ್ದರು. 

ಹಾಗೆಯೇ ಇತ್ತೀಚೆಗೆ ವಾಟ್ಸಾಪ್ನಲ್ಲಿ ಒಬ್ಬರು ತಮ್ಮ ಬ್ಲಾಗ್ ಅನ್ನು ಹಂಚಿಕೊಂಡರು. ಅದರಲ್ಲಿ ಶಬ್ದಗಳು ಸರಿ ಇರಲಿಲ್ಲ ವಾಕ್ಯಗಳಲ್ಲಿ ಕ್ರಿಯಾಪದವೇ ಇರಲಿಲ್ಲ. ಆದರೂ ಜನಗಳು ಆ ಬರಹವನ್ನು ಮೆಚ್ಚಿ ತಮ್ಮ ಕಮೆಂಟುಗಳನ್ನು ಹಾಕಿದ್ದರು! ಅದಕ್ಕೆ ನನ್ನ ಬರಹಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿ ಯಾರಾದರೂ ಕಮೆಂಟ್ ಹಾಕಿದರೆ  ಅವನ್ನು ನಂಬದೇ ಇರುವ ಸ್ಥಿತಿಗೆ ಬಂದಿದ್ದೇನೆ!