ಅವಳಿಗೆ ಎಷ್ಟು ಹೇಳಿದರು ಅರ್ಥವಾಗುವುದಿಲ್ಲ. ಎಲ್ಲ ಕೆಲಸವನ್ನು ಮಾಡುತ್ತಾಳೆ, ಎಲ್ಲರಿಗೂ ತಲೆತಗ್ಗಿಸಿ ಅಜ್ಞಾಪಾಲಕಳಾಗಿ ನಿಂತು ಬಿಡುತ್ತಾಳೆ. ಬೇಡವೆಂದರು ಸರಿಯಲ್ಲವೆಂದರೂ ಕೇಳುವಂತವಳಲ್ಲ. ಭಗವಂತ ಹಲವು ಸೂಚನೆಗಳನ್ನು ನೀಡಿದ ಅವೆಲ್ಲವನ್ನ ಗಮನಿಸಿಯೂ ಕೂಡ ಹಾಗೆ ಮುಂದುವರೆದಿದ್ದಳು. ಅವತ್ತು ಅವಳ ಆತ್ಮೀಯ ಪರಿಚಯದವರು ಇವಳ ಮನೆ ಮುಂದೆ ಹಾದು ಹೋದರು ನಿಂತು ಮಾತನಾಡಿಸಲಿಲ್ಲ, ದೂರದ ಅಂಗಡಿಗೆ ನಡೆದು ಬರುವುದಕ್ಕೆ ಹೇಳಿದರು ನಡೆದು ಹೋರಾಟಳು, ಕೆಲಸ ಮುಗಿಸಿಕೊಂಡು ವಾಪಸು ಮತ್ತದೇ ದಾರಿಯಲ್ಲಿ ಹೊರಟರು ಕೂಡ ಅವಳನ್ನು ಗಾಡಿಯಲ್ಲಿ ಹತ್ತಿಸಿಕೊಳ್ಳಲಿಲ್ಲ. ಅವಳಿಗೆ ಅರ್ಥವಾಗಿತ್ತು ತನ್ನ ಸ್ಥಾನ ಏನು ಅಂತ. ಆ ಪಾಠ ಅವಳ ಬದುಕಿಗೆ ಅನಿವಾರ್ಯವಾಗಿತ್ತು. ವಿಪರೀತವಾಗಿ ದೊರಕಿದರೆ ಅವುಗಳ ಬೆಲೆ ಕಡಿಮೆ ಆಗ್ತಾ ಹೋಗುತ್ತೆ ಹಾಗಾಗಿ ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳುವ ನಿರ್ಧಾರಕ್ಕೆ ಬಂದಳು. ಭಗವಂತ ಸಂಭ್ರಮದಿಂದ ಆಗಸದಿಂದ ಮಿಂಚೊಂದನ್ನು ಮಿನುಗಿಸಿಬಿಟ್ಟ ಅದೇ ದಾರಿಯಲ್ಲಿ ನಡೆದು ಹಾಗೆ ಮನೆ ಸೇರಿದಳು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!