ನಿನ್ನದೇನಿದೆಯೋ...ದೋಣಿಯಲ್ಲಿ ಬಂದು ದೊಡ್ಡ ಬಲೆಯನ್ನು ಬೀಸಿ ನಮ್ಮನ್ನ ಹಿಡಿದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಬೆಲೆ ಕಟ್ಟಿ ಮಾರ್ತೀರಾ… ನನಗೆ  ಒಂದು ದಿನವೂ ಆಹಾರ ಹಾಕಿದವರಲ್ಲ ಒಳ್ಳೆಯ ನೀರನ್ನ ಬದುಕೋಕೆ ಬಿಟ್ಟವರಲ್ಲ... ಸಣ್ಣವರು ದೊಡ್ಡವರಲ್ಲದೆ ಪ್ರತಿಯೊಬ್ಬರನ್ನ ನಿಮ್ಮ ಸ್ವಾರ್ಥಕ್ಕೆ ಬಳಸಿಕೊಂಡವರು... ನಮಗೂ ಬದುಕಿದೆ ಕುಟುಂಬವಿದೆ ಸ್ವಾತಂತ್ರವಿದೆ ಅನ್ನೋದನ್ನ ನೀವು ಯಾವತ್ತೂ ಗಮನಿಸಿ ಇಲ್ಲ. ನಿಮಗೆ ಒಂದು ದಿನವ ಅನಿಸಿಲ್ವಾ ನಮ್ಮ ಸಾವಿನಿಂದ ನೀವು ಬದುಕ್ತಾ ಇದ್ದೀರಿ ಅಂತ. ಒಂದು ಸಲ ಯೋಚನೆ ಮಾಡಿ ನೋಡಿ...ಹೀಗಂತ ಸಾಲಾಗಿ ಇಟ್ಟಿದ್ದ ಬೇರೆ ಬೇರೆ ಜಾತಿಯ ಮೀನುಗಳು ನನ್ನನ್ನು ನೋಡಿ  ಹೇಳುವುದಕ್ಕೆ ಆರಂಭ ಮಾಡಿದವು... ಕೇಳಿಸಿಕೊಂಡೆ ಕೆಲವನ್ನ ಮನೆಯ ಪದಾರ್ಥಕ್ಕೆ ತೆಗೆದುಕೊಂಡೆ ಹೋದೆ.

- ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ