ಕಾರಣ ಕಾಯುತ್ತಿದೆ. ಅದಕ್ಕೆ ಎಲ್ಲಾದರೊಂದು ಕಡೆ ನುಗ್ಗಿಕೊಳ್ಳಲೇಬೇಕು, ನುಗ್ಗಿ ತನ್ನ ಸ್ಥಾನವನ್ನ ಗಟ್ಟಿಗೊಳಿಸಿಕೊಳ್ಳಬೇಕು, ಹಾಗಾಗಿ ನಮ್ಮ ಮಾತಿನ ನಡುವೆ ಬದುಕಿನ ನಡುವೆ ಸಂಬಂಧದ ನಡುವೆ, ಪ್ರೀತಿ ದ್ವೇಷ ಅಸೂಯೆ ಈ ಎಲ್ಲದರ ನಡುವೆ ಆಗಾಗ ನುಗ್ಗಿ ಹೊರಬರುತ್ತಿರುತ್ತದೆ. ನಾವು ನಮಗೆ ಅಗತ್ಯವಿದ್ದರೆ ಮಾತ್ರ ಅದನ್ನು ಗಟ್ಟಿಯಾಗಿ ಹಿಡಿದು ನಮ್ಮ ಜೊತೆ ಬೆಳೆಯಬೇಕು, ಇಲ್ಲವಾದರೆ ಆದಷ್ಟು ದೂರಕ್ಕೆ ಸರಿಸಿ ಮುಂದುವರಿಯುವ ಪ್ರಯತ್ನ ಮಾಡಬೇಕು. ಹಾಗಾಗಿ ಕಾರಣ ದೂರದಲ್ಲೇ ಉಳಿದುಬಿಡುತ್ತದೆ. ಸಾಧ್ಯವಾದರೆ ನಮ್ಮ ಬದುಕಿಗೆ ಉಪಯೋಗವಾದರೆ ಜೊತೆಗೆ ಕೈ ಹಿಡಿದು ನಡೆಯುವ ಕೆಲಸವನ್ನು ಮಾಡಬಹುದು. ಹಾಗಾಗಿ ಕಾರಣ ನಮಗೆ ಬೇಕು ಬೇಡ್ವೊ ಬದುಕಿಗೆ ಅನ್ನುವ ತೀರ್ಮಾನವನ್ನು ನಾವು ಮಾಡಬೇಕು. ನಾಲ್ಕು ರಸ್ತೆ ಸೇರುವಲ್ಲಿ ಕಾರಣ ಕಾಯುತ್ತಿದೆ ಬೇಕಾದವರು ತಮ್ಮ ಜೊತೆ ನಡೆಸಿಕೊಂಡು ಹೋಗಬಹುದು ಜೊತೆಗಿರಿಸಿಕೊಂಡು ಹೋಗಬಹುದು ತೊರೆದಾದರೂ ಹೋಗಬಹುದು... ಕಾರಣ ಕಾಯುತ್ತಿದೆ ಅಷ್ಟೇ..
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!