ಅವನು ನೋವಿನಿಂದ ಕಾಯುತ್ತಿದ್ದಾನೆ. ತನ್ನ ಜೀವಿತಾವಧಿಯ ಇಷ್ಟು ವರ್ಷಗಳ ಅವಿರತ ಶ್ರಮಕ್ಕೆ ಎಲ್ಲೂ ಕೂಡ ಬೆಲೆ ಸಿಕ್ತಾ ಇಲ್ಲ, ಯಾರು ಅದನ್ನ ಗಮನಿಸ್ತಾ ಇಲ್ಲ, ಹಾಗಾಗಿ ಆತನಿಗೆ ತುಂಬಾ ಚೆನ್ನಾಗಿ ಅರ್ಥ ಆಗಿ ಹೋಗಿದೆ ಇಲ್ಲೇ ಸತ್ತ ಮೇಲೆ ಗುರುತಿಸುವವರು ಹೆಚ್ಚು ಹಾಗಾಗಿ ಸತ್ತ ಮೇಲೆ ತನ್ನ ಸಾಧನೆಗಳು ಎಲ್ಲರಿಗೂ ಸಿಗುವುದಕ್ಕೆ ಬರವಣಿಗೆ ಆರಂಭಿಸಿದ್ದಾನೆ. ತನಗೆ ಸಿಕ್ಕಿದ ಎಲ್ಲಾ ಪದವಿ ಪುರಸ್ಕಾರಗಳನ್ನ ತನ್ನ ಬರವಣಿಗೆಗಳನ್ನು ಎಲ್ಲವನ್ನು ಒಂದು ಕಡೆ ಶೇಖರಿಸುವ ಕಾರ್ಯವನ್ನು ಮಾಡುತ್ತಿದ್ದಾನೆ. ಹಲವು ತಿಂಗಳುಗಳು ದಾಟಿ ಹೋದರು ಅದು ಮುಗಿಯುತ್ತಿಲ್ಲ. ಹಾಗೆ ರಾತ್ರಿ ಹಗಲೆಲ್ಲದೆ ಶ್ರಮಪಟ್ಟು ಎಲ್ಲವನ್ನು ಒಂದು ಕಡೆ ಜೋಡಿಸಿಟ್ಟು ಬಿಟ್ಟಿದ್ದಾನೆ .ಹಾಗೆ ಜೋಡಿಸುತ್ತಾ ಜೋಡಿಸುತ್ತಾ ಊಟ ತಿಂಡಿ ನಿದ್ದೆ ಬಿಟ್ಟ ಕಾರಣಕ್ಕೆ ದೇಹ ಕೃಷವಾಗಿ ಉಸಿರು ನಿಂತು ಹೋಯ್ತು. ಎಲ್ಲೋ ಒಂದು ಮೂಲೆಯಲ್ಲಿ ಆತನ ಚಿತೆ ಉರಿಯುವುದಕ್ಜೆ ಪ್ರಾರಂಭ ಆಯಿತು. ಬಂದವರು ಅವನ ಬಗ್ಗೆ ಕಥೆಗಳನ್ನ ಸೃಷ್ಟಿಸುವುದಕ್ಕೆ ಆರಂಭಿಸಿದರು. ಹಾಗೆ ಸೃಷ್ಟಿಸುತ್ತಾ ಹೋದಾಗ ಆತನ ನಿಜವಾದ ಬದುಕು ಅರ್ಥವಾಗಿ ಹೋಯ್ತು. ಬಂದ ಎಲ್ಲರೂ ಹೇಳುತ್ತಿದ್ದದ್ದು ಇಷ್ಟೆ ಇಂತಹ ಅದ್ಭುತ ಸಾಧಕ ನಮ್ಮ ನಡುವೆ ಇದ್ದದ್ದೇ ನಮ್ಮ ಪುಣ್ಯ ಇಂಥವರು ಇನ್ನು ಹೆಚ್ಚು ಜನಿಸಬೇಕು ಅಂತ . ಆದರೆ ಆತನಿಗೆ ಬದುಕಿರುವಷ್ಟು ದಿನವೂ ಒಂದು ದಿನ ಈ ಯೋಚನೆ ಬರಲೇ ಇಲ್ಲ. ಆತ ಬೂದಿಯಾಗಿ ಬಿಟ್ಟ. ಜನ ಮಾತಾನಾಡುವುದಕ್ಕೆ ಆರಂಭಿಸಿದರು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!