ಅವನ ಟೇಬಲ್ ಮುಂದಿರುವ ಕೈಗಡಿಯಾರ ಒಂದು ತುಂಬಾ ನೋವಿನಿಂದ ಅಳುತ್ತಿದೆ. ಅದರ ಅಳುವಿಗೆ ಕಾರಣವೇನೆಂದರೆ ಇಷ್ಟು ದಿನದವರೆಗೆ ತನ್ನನ್ನ ಆ ವ್ಯಕ್ತಿ ಕೈಯಲ್ಲಿ ಧರಿಸಿ ಎಲ್ಲಾ ಕಡೆಗೂ ಓಡಾಡ್ತಾ ಇದ್ದ ಮೌಲ್ಯವನ್ನು ಇನ್ನೊಂದಷ್ಟು ಹೆಚ್ಚು ಎತ್ತರಕ್ಕೆ ಏರಿಸಿದ್ದ. ನಾನವರಿಗೆ ಸರಿಯಾದ ಸಮಯವನ್ನು ತೋರಿಸಿ ಅವನ ಬದುಕು ಸರಿಯಾದ ದಾರಿಯಲ್ಲಿ ಸಾಗುವ ಹಾಗೆ ಮಾಡಿದ್ದೆ ಕೂಡ ಆದರೆ ಇತ್ತೀಚೆಗೆ ನಾನು ಹಾಳಾಗಿದ್ದೇನೆ. ನನ್ನನ್ನ ಕಣ್ಣೆತ್ತಿಯೂ ನೋಡುತ್ತಾ ಇಲ್ಲ ಗಮನಿಸ್ತಾ ಇಲ್ಲ ಇಷ್ಟು ದಿನ ನಾನವನಿಗೆ ಸಮಯ ಪಾಲನೆ ಕಲಿಸಿದಕ್ಕೂ ಅರ್ಥವೇ ಸಿಕ್ತಾ ಇಲ್ಲ ಅವನ ಕೈಗೆ ಆಭರಣವಾಗಿದ್ದರು ಈಗ ಕಡೆಗಣಿಸಿದ್ದಾನೆ. ನಾನು ಬಳಕೆಯಲ್ಲಿದ್ದಾಗ ಮಾತ್ರ ನನ್ನ ಮೌಲ್ಯ ಹೆಚ್ಚಿದ್ದು ನಾನು ಚಲನೆಯಲ್ಲಿದ್ದಾಗ ಮಾತ್ರ ನನ್ನ ನೆನಪಾದದ್ದು, ಹೀಗೆ ನಿನಗೆ ಹೇಳ್ತಾ ಇರೋದು ಬೇರೆ ಯಾರಿಗೂ ಅಲ್ಲ ,ನೀನು ಒಂದು ಕಡೆ ನಿಂತು ಬಿಟ್ಟರೆ ಯಾರು ಗಮನಿಸುವುದಿಲ್ಲ, ಅದಕ್ಕೆ ಚಲಿಸ್ತಾ ಇರಬೇಕು ಗೌರವ ಹೆಚ್ಚು ಸಾಧನೆಯು ಹೆಚ್ಚು... ಈಗ ನಾನು ಆ ಕೈಗಾಡಿಯಾರದ ಮಾತನ್ನು ಕೇಳಲೇಬೇಕು ಯಾಕೆಂದರೆ ಇಷ್ಟು ದಿನ ಸಮಯದೊಂದಿಗೆ ಹೆಜ್ಜೆ ಇಟ್ಟವನಲ್ಲವೆ ಅವನು?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!