ಮನಸ್ಸಿನ ರಾಜ್ಯದೊಳಗೆ ಯುದ್ಧ ಗೆಲ್ಲುವುದಕ್ಕೆ ತಯಾರಿ ನಡೆದಿದೆ. ಯುದ್ಧವನ್ನ ಗೆಲ್ಲಲೇಬೇಕು ಅಂತ ತೀರ್ಮಾನಿಸಿ ಆಗಿದೆ. ಹಾಗಾಗಿ ಸುರೇಶ ಎಲ್ಲಿ ಯುದ್ಧ ಆಗುತ್ತೆ ಯುದ್ಧದ ತಯಾರಿಗಳೇನು ಯುದ್ಧದ ಹಿನ್ನೆಲೆ ಏನು ಯುದ್ಧ ಗೆದ್ದ ಮೇಲೆ ಏನಾಗುತ್ತದೆ ಹೀಗೆ ಎಲ್ಲ ರಣತಂತ್ರಗಳನ್ನ ತನ್ನ ಎದುರು ಸಿಕ್ಕ ಪ್ರತಿಯೊಬ್ಬರಲ್ಲೂ ಹಂಚಿಕೊಳ್ಳುತ್ತಾ ಸಾಗಿದ್ದಾನೆ .ಹೀಗೆ ಯುದ್ಧವನ್ನ ಗೆಲ್ಲುವುದರ ಬಗ್ಗೆ ಚರ್ಚೆ ಮಾಡುವುದರಲ್ಲಿ ನಿರತನಾಗ್ತಾ ಮುಂದುವರೆದು ವೈಯಕ್ತಿಕವಾಗಿ ಮಾಡಿಕೊಳ್ಳಬೇಕಾದ ತಯಾರಿಯನ್ನು ಇನ್ನೂ ಮಾಡಿಕೊಳ್ಳದೆ ಹಾಗೆ ಉಳಿದಿದ್ದಾನೆ. ಯುದ್ಧದ ದಿನ ಹತ್ತಿರ ಬಂದಾಗಿತ್ತು ಇವನಿಗಿಂತ ಮೊದಲು ಇವನ ಶತ್ರುಗಳೇ ಆ ಯುದ್ಧವನ್ನು ಗೆದ್ದುಕೊಂಡು ವಿಜಯದ ಪತಾಕೆ ಹಾರಿಸಿಬಿಟ್ಟರು. ಇವನ ಕೈಯಲ್ಲಿ ಅವಕಾಶವಿದ್ದರೂ ಕಳೆದುಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ. ಹಾಗಾಗಿ ಸುರೇಶನ ಮಾತಿಷ್ಟೇ ನೀವು ಯುದ್ಧವನ್ನು ಗೆಲ್ಲಬೇಕಾದರೆ ವೈಯಕ್ತಿಕವಾಗಿ ಶ್ರಮವನ್ನ ಪಟ್ಟು ಗೆದ್ದು ಬಿಡಿ. ಯುದ್ಧ ಗೆಲ್ಲುವುದಕ್ಕಿಂತ ಹೆಚ್ಚಾಗಿ ಅದರ ಬಗ್ಗೆ ಮಾತುಕತೆಗಳು ನಡೆಯುತ್ತಾ ಹೋದರೆ ಸಿಕ್ಕವರೆಲ್ಲರಲ್ಲೂ ಸಂವಾದಗಳನ್ನು ಬೆಳೆಸಿದರೆ ಯುದ್ಧ ಯಾವತ್ತೂ ಗೆಲ್ಲೋದಕ್ಕೆ ಸಾಧ್ಯ ಆಗೋದಿಲ್ಲ. ಇದು ನಿಮ್ಮ ಮನಸ್ಸಿನೊಳಗೂ ಕೂಡ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!