ಅವನಿಗೆ ಸಮಸ್ಯೆಗೆ ಪರಿಹಾರ ಬೇಕಿತ್ತು. ಹಾಗಾಗಿ ಬಳಿಗೆ ಬಂದಿದ್ದ. ಸರ್, ಕೈಗೆಟುಕುವಾಗಲೇ ನಮಗೆ ಬೇಕಾದನ್ನು ಕೊಯ್ದುಕೊಳ್ಳಬೇಕು ಇಲ್ಲವಾದರೆ ತುಂಬಾ ಎತ್ತರಕ್ಕೇರಿ ನಮ್ಮ ಕೈಗೆಟುಕದೆ ಹಾಗೆ ಉಳಿದುಬಿಡುತ್ತದೆ. ಇದು ಸರಿಯೋ ಅಥವಾ ನಮಗೆ ಕೈಗೆಟುಕದಷ್ಟು ಎತ್ತರವಿದ್ದಾಗ ಶ್ರಮಪಟ್ಟು ಅದನ್ನು ಕೊಯ್ದುಕೊಳ್ಳಬೇಕೋ ಈ ಎರಡರ ಯೋಚನೆಯಲ್ಲಿ ಹಾಗೆ ಮುಳುಗಿ ಹೋಗಿದ್ದಾನೆ ನಾನು ಯಾವುದನ್ನು ಆರಿಸಿಕೊಳ್ಳಬೇಕು, ಸತತ ಶ್ರಮ ಪಟ್ಟಾಗ ಸಿಗುವುದಕ್ಕೆ ಹೆಚ್ಚು ಬೆಲೆ ಇದೆ ಮತ್ತು ಶ್ರಮ ಪಟ್ಟದಕ್ಕೊಂದು ಅರ್ಥವಿದೆ, ಕೈಗೆಟುಕವಾಗಲೇ ಕೊಯ್ದುಕೊಂಡು ಬಿಟ್ಟರೆ ಅದಕ್ಕೇನು ಬೆಲೆ. ಹಾಗಾಗಿ‌ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು? ಅವನಿಗೆ ಉತ್ತರ ಕೊಡುವುದಕ್ಕೆ ನನಗೆ ಗೊತ್ತಾಗ್ಲಿಲ್ಲ. ಹಾಗಾಗಿ ನಿಮ್ಮ ಬಳಿ ಕೇಳುತ್ತಿದ್ದೇನೆ ದಯವಿಟ್ಟು ಸಮಸ್ಯೆಗೊಂದು ಪರಿಹಾರ ಕೊಡಿ

- ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ