ಈ ಬಕಾಸುರರ ಜೊತೆ ಬದುಕೋದು ಹೇಗೆ? ಇಲ್ಲಿ ಎಲ್ಲರೂ ಬಕಾಸುರರಾಗಿಬಿಟ್ಟಿದ್ದಾರೆ. ಅವರಿಗೆ ಎಷ್ಟು ತಿಂದರೂ ಸಾಕಾಗುವುದಿಲ್ಲ. ಅವರಿಗೆ ಅಜೀರ್ಣವೂ ಆಗುವುದಿಲ್ಲ. ಹಸಿವು ಸಾಮಾನ್ಯದಲ್ಲ. ಇವರು ಸಮಯವನ್ನು ತಿನ್ನುವ ಸಮಯ ಸಾಧಕರು. ತಮ್ಮ ಸಮಯವನ್ನು ತಿನ್ನುತ್ತಾ ಅದರ ಜೊತೆಗೆ ತನ್ನೊಂದಿಗೆ ತನ್ನ ಕೆಲಸಕ್ಕೆ ಬರುವ ಎಲ್ಲರ ಸಮಯವನ್ನು ತಿಂದು ಹಾಕುತ್ತಿದ್ದಾರೆ. ಕಾರ್ಯಕ್ರಮವನ್ನು ಹೇಳಿದ ಸಮಯಕ್ಕಿಂತ ತಡವಾಗಿ ಆರಂಭ ಮಾಡುವವರು, ಒಬ್ಬರನ್ನ ಗಂಟೆಗಟ್ಟಲೆ ಕಾಯಿಸುವವರು, ಸಮಯ ನಿಗದಿ ಮಾಡಿ ಮರೆತು ಹೋಗುವವರು, ಹೇಳಿದ ಸಮಯಕ್ಕೆ ಬಾರದವರು ಹೀಗೆ ಇವರದು ಬೇರೆ ಬೇರೆ ರೂಪಗಳಲ್ಲಿ ಬಕಾಸುರ ತತ್ವವನ್ನು ಅಳವಡಿಸಿಕೊಂಡು ಮುಂದುವರಿತಾರೆ. ಇಂತಹ ಬಕಾಸುರರು ಈ ನೆಲದಿಂದ ನಾಶವಾದ ದಿನ ಜಗತ್ತೇ ಬದಲಾಗಿಬಿಡುತ್ತದೆ. ಈ ಬಕಾಸುರನ ವಿಷಯ ಬರುವುದಕ್ಕೆ ಕಾರಣ ಇಷ್ಟೇ ನಾನು ಅದೇ ಬಕಾಸುರನ ವಂಶಕ್ಕೆ ಸೇರುತ್ತಿದ್ದೇನೆ ಅನ್ನಿಸುತ್ತಿದೆ. ಅಲ್ಲಿಂದ ಒಮ್ಮೆ ಹೊರಗೆ ಬರಲೇಬೇಕು. ನಿಮ್ಮಲ್ಲಿ ಏನಾದರೂ ಅದಕ್ಕೆ ಮದ್ದಿದ್ದರೆ ತಿಳಿಸಿಕೊಡಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!