ಅಪ್ಪನ ಬಳಿ ತುಂಬಾ ಸಲ ಕೇಳಿಕೊಂಡಿದೆ ನನಗೆ ಸಮುದ್ರ ನೋಡಬೇಕು. ಆ ನೀರಿನಲ್ಲಿ ಆಟವಾಡಬೇಕು ಹೀಗೆ ಪ್ರತಿ ಸಲಾ ಅದನ್ನು ಕೇಳಿಯೂ ಅಪ್ಪ ಸುಮ್ಮನಾಗಿ ಬಿಡುತ್ತಿದ್ದರು ಆದರೆ ನಿನ್ನೆ ಸಂಜೆಯಾಗುವಾಗ ಅಪ್ಪನಿಗೆ ಏನು ಅನ್ನಿಸ್ತೋ ಗೊತ್ತಿಲ್ಲ. ನಾನು ಶಾಲೆಯಲ್ಲಿ ಕೊಟ್ಟ ಕೆಲಸ ಇದೆ ಅಂತಂದರೂ ಕೂಡ ಅದನ್ನು ಕೇಳದೆ ಬಾ ನಿನಗೆ ಸಮುದ್ರ ತೋರುಸ್ತೇನೆ ಅಂತ ಕರೆದುಕೊಂಡು ಹೋದರು ಹಾಗೆ ಸಮುದ್ರವನ್ನು ನಾನು ಆಸ್ವಾದಿಸ್ತಾ ಅಪ್ಪನ ಕೈ ಬಿಟ್ಟು ಓಡಬೇಕು ಅನ್ನುವಷ್ಟರಲ್ಲಿ ಅಪ್ಪ ಬಿಗಿಯಾಗಿ ನನ್ನ ಹಿಡಿದುಕೊಂಡಿದ್ದರು ನಾನೆಷ್ಟೇ ಕೋಸರಾಡಿದರೂ ಅವರು ನನ್ನನ್ನ ಬಿಡುವುದಕ್ಕೆ ತಯಾರಿಲ್ಲ. ನೋಡು ಮಗು ನಮಗೆ ಬದುಕೇನು ಅಂತ ಇಲ್ಲಿಯವರೆಗೆ ಅರ್ಥವಾಗಿದೆ ತಂದೆ ಇಲ್ಲದೆ ನೀನು ಒಬ್ಬಂಟಿಯಾಗಿ ಬದುಕೋದು ನಿನಗೆ ತುಂಬಾ ಕಷ್ಟವಾಗುತ್ತದೆ ಈ ಸಮಾಜದ ನಡುವೆ ನೀ ತಲೆಯೆತ್ತಿ ಬದುಕುವುದಕ್ಕಾಗುವುದಿಲ್ಲ ಹಾಗಾಗಿ ನಾವಿಬ್ಬರೂ ಜೊತೆಯಾಗಿ ಮಲಗೋಣ ಅಂತಂದು ಸಮುದ್ರದ ಅಲೆಗಳ ಜೊತೆಗೆ ನನ್ನನ್ನ ನಡೆಸುವುದಕ್ಕೆ ಆರಂಭಿಸಿದರು. ಹಾಗೆ ಹೆಜ್ಜೆಗಳು ಸಮುದ್ರ ತೀರವನ್ನು ತೊರೆದು ಸಮುದ್ರದೊಳಕ್ಕೆ ನಡೆಯುವುದಕ್ಕೆ ಪ್ರಾರಂಭವಾದವು. ನನಗೆ ಬೇಡ ಭಯವಾಗ್ತಿದೆ ಎದುರು ಕೇಳಲೇ ಇಲ್ಲ ಸಮುದ್ರದ ನೀರು ಹೆಚ್ಚಾಗ್ತಾ ಇತ್ತು ನನಗೆ ಉಸಿರು ಕಟ್ಟಿದಂತಾಗುತ್ತಿತ್ತು. ಆದರೆ ಅಪ್ಪನ ಮುಖದಲ್ಲಿ ಯಾವುದೇ ಬದಲಾವಣೆ ಇಲ್ಲ. ಆ ತಕ್ಷಣಕ್ಕೆ ಯಾರೋ ದೂರದಲ್ಲಿದ್ದ ನಾಲ್ಕು ಜನ ಓಡಿ ಬಂದು ನಮ್ಮನಲ್ಲಿಂದ ಎಳೆದುಕೊಂಡು ಬದಿಗೆ ಕರೆದುಕೊಂಡು ಹೋಗಿ ನಮ್ಮ ಪ್ರಾಣ ಉಳಿಸಿ ಬಿಟ್ರು. ಅಪ್ಪನೇ ಜೊತೆಗೆ ನನ್ನನ್ನು ಸಾಯಿಸುವ ಯೋಚನೆ ಮಾಡಿದ್ದಾದರೂ ಯಾಕೆ? ನಾನು ಅವರಿಗೆ ಬೇಡವಾಗಿದ್ದೇನು? ಅಥವಾ ಅವರ ಬದುಕು ಅವರಿಗೆ ಕಷ್ಟವಾಗಿದ್ಯೋ? ನನ್ನಿಂದ ಏನಾದರೂ ಸಮಸ್ಯೆ ಆಗ್ತಾ ಇದೆಯಾ? ಅಪ್ಪಾ ಇನ್ನು ನಿನ್ನ ಬಳಿ ನಾನೇನೂ ಕೇಳುವುದಿಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!