ಬೋಳಾದ ಗದ್ದೆಯಲ್ಲಿ ಕುಳಿತು ಆಕಾಶ ನೋಡುತ್ತಿದ್ದಾನೆ. ಮಳೆರಾಯ ಪ್ರತಿವರ್ಷ ಬರುವವನು ಇತ್ತೀಚೆಗೆ ಕೆಲವು ದಿನಗಳಿಂದ ರಜೆ ಹಾಕಿ ಊರು ಬಿಟ್ಟಿದ್ದಾನೆ. ಎತ್ತರವಾಗಿ ಬೆಳಗ ಬೇಕಾದ ಬೆಳೆಗಳು ಸೊರಗಿ ಹೋಗುತ್ತಿವೆ. ಆ ರೈತನಿಗೆ ಬೆಲೆ ಸಿಕ್ತಾ ಇಲ್ಲ. ಬೆಳೆಗಳಿಗೂ ಬೆಲೆ ಸಿಗ್ತಾ ಇಲ್ಲ. ಚುನಾವಣೆಯಾಗುವಾಗ ಕೈಮುಗಿದು ಮನೆಯ ಬಳಿಗೆ ಬಂದವರಿಗೆ ನೆನಪಾಗ್ತಾನೆ ಇಲ್ಲ. ಅಂಗಡಿಯಿಂದ ಖರೀದಿಸುವ ದೊಡ್ಡ ದೊಡ್ಡ ವಸ್ತುಗಳಿಗೆ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡುತ್ತಾರೆ, ಆದರೆ ಶ್ರಮವಹಿಸಿ ದುಡಿದ ಬೆಳೆಗೆ ಬೆಲೆಯನ್ನು ನಿಗದಿ ಮಾಡೋರೆ ಇಲ್ಲವಾಗಿಬಿಟ್ಟಿದೆ. ಇದು ಬದಲಾಗಲೇಬೇಕು. ನನಗೆ ಬೆಲೆ ಸಿಗದಿದ್ದರೂ ತೊಂದರೆ ಇಲ್ಲ ಆದರೆ ನಮ್ಮ ಬೆವರಿನ ಹನಿಗೆ ಬೆಲೆ ನೀಡುವ ಮನಸ್ಸು ಮಾಡಿ, ನೀವು ಹೊಟ್ಟೆ ತುಂಬ ತಿಂತೀರಿ ರಾತ್ರಿ ಮಲಗುತ್ತೀರಿ ಅದಕ್ಕೆ ನಮ್ಮ ನಿದ್ದೆ ಇಲ್ಲದ ರಾತ್ರಿಗಳು ದೇಹದಿಂದ ಹರಿದ ಬೆವರು ಕಾರಣ . ನೆನಪಿಟ್ಟುಕೊಳ್ಳಿ ಬೆವರಿನೊಂದಿಗೆ ಕಣ್ಣೀರು ನೆಲಕ್ಕೆ ಇಳಿದರೆ ನಿಮ್ಮನ್ನ ಮಣ್ಣಾಗಬಹುದು. ಹೆಚ್ಚೇನು ಮಾಡೋದಕ್ಕೆ ಆಗೋದಿಲ್ಲ ಕೇಳಿಕೊಳ್ಳಬೇಕಷ್ಟೆ. ಮೇಲೆ ಕುಳಿತವರ್ಯಾರು ಗದ್ದೆಯಲ್ಲಿ ದುಡಿದವರಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!