ಏನ ಹೇಳಲಿ ನಾನು

ನಿನ್ನ ಪ್ರೀತಿಯ ಸವಿಗೆ 

ಮಾತಿನೊಳು ಗೆಲುವಾದೆ ಪ್ರೇಮದುಡುಗೆ

ಮುತ್ತಿನೊಲವಿನ ಕೊಡುಗೆ

ಚಿತ್ತಾರ ಎಳೆದಿರಲು

ಮತ್ತಿನೊಳು ಸೆರೆಯಾದೆ ಮನದಯೆಡೆಗೆ

 

ಮಧುರ ಬಾಂಧವ್ಯವೂ

ಸುತ್ತೆಲ್ಲ ಹರಡಿರಲು

ಸುಖವಾದ ಕನಸೆಲ್ಲ ತನುವಿನೊಳಗೆ

ಮನುಜ ಪ್ರೇಮದ ಜೊತೆಗೆ

ಜತನದೊಳು ಖುಷಿಯಾಗಿ

ವಚನ ವಾಕ್ಯಗಳೆಲ್ಲ ಹೃದಯದೊಳಗೆ

 

ವದನದ ತುಂಬೆಲ್ಲ

ಒನಪು ವಯ್ಯಾರವಿರೆ

ಸೌಂದರ್ಯ ತುಂಬಿರಲು ಸಪ್ನ ನಡಿಗೆ

ಎದೆಯಾಳದ ನನಸು

ಮೈದುಂಬಿ ನಿಂತಿರಲು

ಚೆಲುವೆಯೆ ಎನ್ನರಸಿ ನನ್ನ ಸೆರೆಗೆ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ