ಪಥ್ಯ
ಆರೋಗ್ಯವಂತನಾಗಿಯೇ ಇದ್ದ ಸೂರಿ ಒಮ್ಮಿಂದೊಮ್ಮೆಗೆ ಕಾಯಿಲೆಬಿದ್ದ. ಇದು ಮಾಮೂಲಿ ಕಾಯಿಲೆಯಾಗಿರಬಹುದೆಂದು ಔಷಧಿ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ವಾರ ಕಳೆದರೂ ಕಾಯಿಲೆ ವಾಸಿಯಾಗದಿದ್ದಾಗ ಪತ್ನಿ ಶ್ರೀಮತಿಯ ಒತ್ತಾಯದ ಮೇರೆಗೆ ಕೊನೆಗೂ ತನ್ನ ಫ್ಯಾಮಿಲಿ ಡಾಕ್ಟರಲ್ಲಿಗೆ ಹೋದ.
"ನೀವು ಸೇವಿಸುತ್ತಿರುವ ಆಹಾರದ ಬಗ್ಗೆ ತುಂಬಾ ಕಾಳಜಿವಹಿಸಬೇಕು" ಸೂರಿಯ ತಪಾಸಣೆ ಮಾಡಿದ ಡಾಕ್ಟರರು ಸಲಹೆ ನೀಡಿದರು.
"ಅಂದರೆ ?'" ಸೂರಿ ವಿಚಾರಿಸಿದ.
"ಹುಳಿ, ಖಾರ, ಉಪ್ಪಿನ ಪದಾರ್ಥಗಳನ್ನು ತೆಗೆದುಕೊಳ್ಳಬಾರದು, ಎಣ್ಣೆಯಿಂದ ಮಾಡಿದ ವಸ್ತುಗಳನ್ನು ತೆಗೆದುಕೊಳ್ಳಬಾರದು, ಮೀನು, ಮಾಂಸ ತೆಗೆದುಕೊಳ್ಳಬಾರದು...." ಡಾಕ್ಟರರು ಇನ್ನೂ ಏನೇನೋ ಹೇಳುವವರಿದ್ದರು, ಆಗ ಸೂರಿ ನಡುವೆ ಬಾಯಿ ಹಾಕಿ, ''ಶ್ವಾಸವನ್ನಾದರೂ ತೆಗೆದುಕೊಳ್ಳಬಹುದೇ "? ಎಂದು ರೇಗಿ ಡಾಕ್ಟರರಲ್ಲಿ ವಿಚಾರಿಸಿದಾಗ, ಡಾಕ್ಟರರ ಬಾಯಿಯಿಂದ ಮುಂದೆ ಮಾತೇ ಹೊರಡಲಿಲ್ಲ.
***
ಕಷಾಯ
ಶ್ರೀಮತಿ: ತಾರಾ, ನಿಮ್ಮ ಮೈದುನನ ಹೆಂಡತಿ ಬಗ್ಗೆ ಏನೋ ಹೇಳಬೇಕಿತ್ತು, ಆದರೆ ನನಗೆ ಬೇರೆ ಗಂಟಲು ನೋವು.
ತಾರಾ: ಒಳಗೆ ಬನ್ನಿ ಶ್ರೀಮತಿ, ಕಷಾಯ ಮಾಡಿಕೊಡುತ್ತೇನೆ. ಅದೇನು ಹೇಳಿ ಹೋಗುವಿರಂತೆ.
***
ಗ್ಯಾರಂಟಿ
ಸೂರಿ: ಈ ಪ್ಯಾರಾಚೂಟ್ ಸರಿ ಇದೆ ಅಂತೀರಾ, ನಾವು ವಿಮಾನದಿಂದ ಜಿಗಿದಾಗ ಓಪನ್ ಆಗದಿದ್ರೆ?
ವ್ಯಾಪಾರಿ: ಅದಕ್ಕೆ ನೀವೇನು ಯೋಚಿಸಬೇಡಿ, ವಾಪಸ್ ತಂದು ಕೊಡಿ. ಗ್ಯಾರಂಟಿ ನಿಮ್ಮ ಹಣ ವಾಪಸ್ಸು ಕೊಡುತ್ತೇವೆ.
***
ದುರಭ್ಯಾಸ
ಸಂದರ್ಶಕ: ಮಿಸ್ಟರ್ ಸೂರಿ, ನಿಮಗೆ ಯಾವುದೇ ದುರಭ್ಯಾಸಗಳು ಇಲ್ಲ 'ಅಂತೀರಿ, ಹಾಗಾದರೆ ನಿಮಗೆ ಬಹಳ ಸಂತೋಷ ಕೊಡುವ ಯಾವುದಾದರೂ ಅಭ್ಯಾಸವಿದೆಯಾ?
ಸೂರಿ: ನನಗೆ ತುಂಬಾ ಸಂತೋಷ ಕೊಡುವುದು ಸುಳ್ಳು ಹೇಳುವುದು
***
ಭಾಷಣ
ಪೋಲೀಸ್: ಕುಡಿದುಕೊಂಡು ಈ ಮಧ್ಯರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿರುವೆ?
ಸೂರಿ: ಕುಡಿತದ ಬಗ್ಗೆ ಭಾಷಣ ಕೇಳೋದಕ್ಕೆ.
ಪೊಲೀಸ್: ಈ ವೇಳೆಯಲ್ಲಿ ಯಾರು ಭಾಷಣ ಮಾಡೋರು?
ಸೂರಿ: ಮನೇಲಿ ನನ್ನ ಹೆಂಡತಿ ಸಾರ್!
***
ಬುದ್ಧಿವಂತ
ಶ್ರೀಮತಿ: ತಾರಾ, ನಾನು ಮದುವೆ ಆಗುವ ಹುಡುಗ ಬುದ್ಧಿವಂತನಾಗಿರಬೇಕು ಅಂತ ಆ ದೇವರಲ್ಲಿ ಸದಾ ಬೇಡಿಕೊಳ್ಳುತ್ತಿದ್ದೆ
ತಾರಾ: ಹೌದಾ? ನಿನ್ನಾಸೆ ಎಂದಿಗೂ ನೆರವೇರುವುದಿಲ್ಲ. ಬುದ್ಧಿವಂತರು ಮದುವೆಯನ್ನೇ ಆಗೋದಿಲ್ಲ ಗೊತ್ತಾ.
***
ವಿಶೇಷ ಶಕ್ತಿ
ಸೂರಿ: ಪ್ರಾಣಿಗಳಿಗಿಲ್ಲದ ವಿಶೇಷ ಶಕ್ತಿಯೊಂದು ಮಾನವರಿಗಿದೆ. ಅದೇನು ಗೊತ್ತೆ?
ಗಾಂಪ: ಮಾತು.
ಸೂರಿ: ಅದು ಬಿಟ್ಟು?
ಗಾಂಪ: ಗೊತ್ತಿಲ್ಲ, ನೀನೇ ಹೇಳು.
ಸೂರಿ: ಪ್ರಾಣಿಗಳಿಗೆ ಎಷ್ಟೇ ಶರಾಬು ಕುಡಿಸಿದರೂ ಅವು ಮನುಷ್ಯರಾಗುವುದಿಲ್ಲ. ಆದರೆ ಮನುಷ್ಯರಿಗೆ ಅರ್ಧ ಬಾಟಲ್ ಕುಡಿಸಿದರೂ ಅವರು ಪ್ರಾಣಿಗಳಾಗುತ್ತಾರೆ!
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!