ಹಾರುವವರು ಹಾರುತಿರಲಿ ನನ್ನೊಳಗೇನಾಗದು ಗೆಳೆಯ
ಕಾರುವವರು ಕಾರುತಿರಲಿ ನಿನ್ನೊಳಗೇನಾಗದು ಗೆಳೆಯ
ಸಾರುವವರು ಸಾರುತಿರಲಿ ಬದುಕದು ಹಾಳಾಯಿತೆ
ನಾರುವವರು ನಾರುತಿರಲಿ ತವರಿಗೇನಾಗದು ಗೆಳೆಯ
ಹುಟ್ಟುವವರು ಹುಟ್ಟುತಿರಲಿ ಸೋಮಾರಿಗಳೋ ತಿಳಿಯೆ
ಸಾಯವವರು ಸಾಯುತಿರಲಿ ಇವರಿಗೇನಾಗದು ಗೆಳೆಯ
ಜಾರುವವರು ಜಾರುತಿರಲಿ ನೆಲದೊಳಗಿನ ಮಣ್ಣಲಿಂದು
ಹೇಳುವವರು ಹೇಳುತಿರಲಿ ಗೆಲುವಿಗೇನಾಗದು ಗೆಳೆಯ
ಕೂಡುವವರು ಕೂಡುತಿರಲಿ ಉಸಿರೊಳಗೇ ಈಶಾ
ಕಾಡುವವರು ಕಾಡುತಿರಲಿ ಏಳಿಗೆಗೇನಾಗದು ಗೆಳೆಯ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!