ಮೂರು ಬೆಟ್ಟ‌ ದಾಟಿ ಹೋದರೆ ಎರಡು ಕೆರೆಗಳ ಮಧ್ಯ ಹಾದು ಹೋಗಿರುವ ದಾರಿಯಲ್ಲಿ ಒಂದಿಷ್ಟು ದೂರ ಮುಂದೆ ಹೋಗಿ ಆಲದ ಮರದಿಂದ ಎಡಕ್ಕೆ ತಿರುಗಿ ಅದರ ಮುಂದಿರುವ ಪಾಳು ದೇವಸ್ಥಾನದ ಕೆಳಗಡೆ ನಿಧಿ ಇದೆ ಅನ್ನೋದು ಊರಲ್ಲಿ ಸುದ್ದಿಯಾಗಿತ್ತು. ಮಾಮೂಲಿಯಾಗಿ ಕೃಷಿಯನ್ನು ಗದ್ದೆ ತೋಟವನ್ನು ನಂಬಿ ಬದುಕುತ್ತಿದ್ದವರಿಗೆ ಬದುಕಿನ ಆಸೆಯ ಬಗ್ಗೆ ಹೊಸತೊಂದು ಬೆಳಕು ಕಂಡಿದ್ದಲ್ಲಿ . ಊರವರೆಲ್ಲರೂ ದಿನದ ದುಡಿಮೆಯನ್ನು ಮರೆತು ನಿಧಿ ಹುಡುಕಾಟಕ್ಕೆ ಇಳಿದೇಬಿಟ್ರು. ಊರಲ್ಲಿದ್ದ ಒಂದಷ್ಟು ಹಿರಿಯರ ಮಾತುಕತೆ ಕೇಳುವವರಿಲ್ಲ ಮಕ್ಕಳಲ್ಲಿ ಗದ್ದೆ ತೋಟದ ಕಡೆಗೆ ಒಂದಷ್ಟಾದ್ರೂ ಗಮನ ಹರಿಸಿ ಅಂತಂದ್ರೂ ಯಾರೋ ಕೇಳುವವರಿಲ್ಲ ಎಲ್ಲರಿಗೂ ಒಮ್ಮೆಲೆ ಶ್ರೀಮಂತರಾಗಬೇಕಾಗಿತ್ತು. ಒಂದು ತಿಂಗಳು ಗುಂಡಿ ಅಗೆಯುವಿಕೆಯಲ್ಲಿ‌ ಮಣ್ಣು ಸಿಕ್ಕಿತೇ ಹೊರತು ಏನು ಸಿಗಲಿಲ್ಲ. ಅಷ್ಟರಲ್ಲಿ ಗದ್ದೆಯ ತೋಟಗಳು ಒಣಗಿದ್ದವು. ಅವರ್ಯಾರಿಗೂ ತಮ್ಮ ತಮ್ಮ ಗದ್ದೆ ತೋಟಗಳಲ್ಲಿ ಬೆಳೆದ ಬೆಳೆಗಳಿಂದ ನಿಧಿ ಸಿಗುವುದರ ಬಗ್ಗೆ ಯೋಚನೆ ಇರಲಿಲ್ಲ. ಊರು ಒಂದು ವರ್ಷ ಉಪವಾಸದಿಂದಲೇ ಮಲಗಿಬಿಟ್ಟಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ