ಜಗಳ ಆರಂಭವಾಗಿಬಿಟ್ಟಿತ್ತು. ಯಾರು ಅಂದುಕೊಂಡಿರಲಿಲ್ಲ ಇವರು ಕೂಡ ಜಗಳವಾಡುತ್ತಾರೆ ಅಂತ. ಹೊಟ್ಟೆ ಮತ್ತೆ ಕೇಳ್ತಾ ಇದೆ ಅಲ್ಲ ನನಗೆಷ್ಟು ಬೇಕು ಅಂತ ನೋಡುವ ಕಣ್ಣುಗಳು ನೀವೇ ಅಂದಾಜಿಸುವುದಕ್ಕೆ ಹೇಗೆ ಸಾಧ್ಯ ಅದಲ್ಲದೆ ಈ ನಾಲಿಗೆ ಕೆಲವೊಂದು ಸಲ ತನಗೆ ರುಚಿಸೋದಿಲ್ಲ ಅನ್ನೋ ಕಾರಣಕ್ಕೆ ನನಗೆ ಬರಬೇಕಾದನ್ನು ತಡೆಹಿಡಿತದೆ. ಯಾರೋ ಹೇಳಿದ್ದು ಚೆನ್ನಾಗಿದೆ ಅನ್ನುವ ಕಾರಣಕ್ಕೆ ನಿಮ್ಮ ಕೈ ಬಾಯಿಯ ಒಳಗಿನಿಂದ ನನ್ನ ಹೊಟ್ಟೆಗೆ ತಲುಪಿಸುತ್ತೆ. ಹೀಗೆ ನನ್ನ ಅಗತ್ಯವನ್ನು ಗಮನಿಸುವವರು ಇಲ್ಲ. ಅದಕ್ಕೆ ಕಣ್ಣು ಹೇಳೋದಕ್ಕೆ ಪ್ರಾರಂಭ ಮಾಡಿತು. ನಾನು ಸರಿಯಾಗಿ ನಿರ್ಧರಿಸಿರುವುದರಿಂದ ನಿನ್ನ ಹೊಟ್ಟೆ ತುಂಬುತ್ತಾ ಇರೋದು. ನನಗೆ ಗೊತ್ತಿದೆ ನಿನಗೆ ಎಷ್ಟು ಬೇಕು ಯಾವುದನ್ನ ಹೇಗೆ ನೀಡಬೇಕು ಅಂತ, ನಾಲಗೆ ದನಿಗೂಡಿಸ್ತು ನಾನು ಇಲ್ಲದೆ ಹೋಗಿದ್ದಿದ್ದರೆ ನೀನು ನಿನ್ನ ಆಯಸ್ಸನ್ನ ಯಾವಾಗ್ಲೂ ಕಳೆದುಕೊಳ್ಳುತ್ತಾ ಇದ್ದಿ? ನಿನಗೆ ತುಂಬಾ ಅಗತ್ಯವಾಗಿರುವುದನ್ನ ಮಾತ್ರ ನಾನು ಕಳಿಸ್ತೇನೆ, ಹಾಗಾಗಿ ನನಗೆ ಗೌರವ ಕೊಡುವುದನ್ನು ಕಲಿತುಕೋ. ಹೀಗೆ ಇವರೊಳಗೆ ಜಗಳ ತಾರಕಕ್ಕೇರಿ ಬಿಟ್ಟಿತು. ದೇಹ ಕೈಮುಗಿದು ಬೇಡಿಕೊಳ್ಳುತ್ತಿದೆ. ಅಲ್ಲೋ ನೀವೆಲ್ಲರೂ ಜೊತೆಯಾಗಿದ್ದಾಗ ಮಾತ್ರ ಈ ದೇಹ ಮುಂದೆ ಹೆಜ್ಜೆ ಇಡುವುದಕ್ಕೆ ಸಾಧ್ಯ. ಸುಮ್ಮನೆ ಕಚ್ಚಾಟ ನಿಲ್ಲಿಸಿ ಬಿಟ್ಟು ನಿಮ್ಮ ಕೆಲಸವನ್ನು ಮಾಡ್ತಾ ಹೋಗಿ ಎಲ್ಲವೂ ಒಳ್ಳೆಯದಾಗುತ್ತೆ ಎಲ್ಲರೂ ಮೌನವಾಗಿ ಬಿಟ್ಟರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ