ನನಗೆ ಪಾಲು ಸಿಗಲೇಬೇಕು. ಯಾಕೆ ನಾನು ಅಪ್ಪನ ಮಗಳಲ್ವಾ? ಅವರು ನನ್ನನ್ನ ಬೆಳೆಸಿದ್ದಾರೆ, ನಾನು ಪ್ರೀತಿ ಕೊಟ್ಟಿದ್ದೇನೆ. ಅವರು ಸಂಪಾದನೆ ಮಾಡಿದ್ದು ಮಕ್ಕಳಿಗೆ ಮಾತ್ರ ಅಲ್ವಾ? ನನಗೆ ಪಾಲು ಸಿಗಲೇಬೇಕು. ನನಗೂ ಬದುಕಿನಲ್ಲಿ ಆಸೆಗಳಿವೆ, ಹಾಗಾಗಿ ಈ ಪಾಲಿನಿಂದ ನನ್ನ ಕನಸುಗಳು ನನಸಾಗುತ್ತವೆ. ಹಾಗಾಗಿ ನಾನಿದನ್ನ ನನ್ನ ಹಕ್ಕಾಗಿ ಕೇಳಿಕೊಳ್ಳುತ್ತಿದ್ದೇನೆ ಸರಿ ಮಗಳೇ, ನಿನಗೆ ನಿನ್ನ ಅಪ್ಪನ ಆಸ್ತಿಯಲ್ಲಿ ಪಾಲನ್ನು ಕೊಡುವ ಆದರೆ ಅದೇ ರೀತಿ ಅವರು ಹಲವಾರು ಸಾಲುಗಳನ್ನು ಮಾಡಿದ್ದಾರೆ ಆ ಸಾಲಗಳನ್ನು ನೀವೇ ತೀರಿಸಬೇಕು ತಾನೇ ಹಾಗಾಗಿ ಸಾಲವನ್ನು ಪಾಲು ಮಾಡುವ ಕೆಲಸ ನಂದು. ಇಲ್ಲ ಸರ್, ಯಾಕೆ ಪಾಲು ಮಾಡ್ತೀರಿ ಅವರು ಸಾಲ ಮಾಡಿರೋದು ಅವರ ಕನಸಿಗೋಸ್ಕರ ಅವರು ಸಾಲ ಮಾಡಿರೋದು ಅವರ ಬದುಕಿನ ಜವಾಬ್ದಾರಿಗೋಸ್ಕರ ಅವರ ಮಗನ ನೆಮ್ಮದಿಯ ಬದುಕಿಗೋಸ್ಕರ ಇದನ್ನ ಮಗಳ ಮೇಲೆ ಯಾಕೆ ಹೊತ್ತಾಕ್ತೀರಾ? ಹಾಗಾಗಿ ಸಾಲದ ಮೇಲೆ ನನಗೆ ಯಾವುದೇ ರೀತಿಯ ಜವಾಬ್ದಾರಿ ಇಲ್ಲ. ಸಾಲದ ಬಗ್ಗೆ ನನ್ನ ಬಳಿ ಮಾತನಾಡಲು ಬೇಡಿ. ನನಗೇನಿದ್ರೂ ಆಸ್ತಿ ಬೇಕು ಅಷ್ಟೆ. ಸತ್ತ ಮೇಲೆ ಸ್ವರ್ಗಕ್ಕೆ ತೆರಳುತ್ತಿದ್ದ ಅಪ್ಪ ಮಗಳ ಮಾತನ್ನ ಕೇಳಿ ಸುಮ್ಮನೆ ನಕ್ಕು ಬಿಟ್ಟ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!