ಗಿಡ ತುಂಬಾ ನೋವಿನಿಂದ ಅಳ್ತಾ ಇದೆ. ನಾನು ತುಂಬಾ ಎತ್ತರವಾಗಿ ಬೆಳೆದು ನಿಲ್ಲಬೇಕಿತ್ತು, ಹೂವು ಹಣ್ಣುಗಳನ್ನು ನೀಡಬೇಕಿತ್ತು, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಬೇಕಿತ್ತು, ನೆರಳನ್ನೇ ಹಂಚಬೇಕಿತ್ತು, ಆದರೆ ಇದ್ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ ಹಾಗಾದ್ರೆ ಭಗವಂತ ನನ್ನ ಯಾವ ಕಾರಣಕ್ಕೆ ಸೃಷ್ಟಿಸಿದ್ದು ವ್ಯರ್ಥವಾಗಿ ಒಣಗುತ್ತಿದ್ದೇನೆ. ನನ್ನ ಬದುಕು ವ್ಯರ್ಥ ಎನಿಸ್ತಾ ಇದೆ .ಹಾಗೆ ನೋವಿನಿಂದ ನೀರನ್ನು ಹೀರಿಕೊಳ್ಳದೆ ಸಾಯುವ ಸ್ಥಿತಿಗೆ ತಲುಪಿತ್ತು. ಭಗವಂತ ಕಷ್ಟವನ್ನು ನೋಡೋಕಾಗದೆ ಪ್ರತ್ಯಕ್ಷನಾಗಿ ಬಿಟ್ಟ, ನೋಡು ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ನಿನ್ನನ್ನ ಬೀಜವಿರುವಾಗ ಹಾಕಿದ ಮಣ್ಣು ಸರಿ ಇಲ್ಲ. ಸೂಕ್ತವಾದ ನೆಲದಲ್ಲಿ ನಿನ್ನನ್ನು ಬೆಳೆಯುವ ಹಾಗೆ ಮಾಡಿಲ್ಲ ಆ ಕಾರಣಕ್ಕೆ ಇದೆಲ್ಲವೂ ಸಾಧ್ಯ ಆಗಿರೋದು . ದಯವಿಟ್ಟು ವ್ಯಥೆ ಪಡಬೇಡ. ನಿನ್ನ ಬೀಜಗಳು ಉತ್ತಮವಾದ ನೆಲವಿರುವ ಕಡೆಗೆ ಬಿದ್ದು ನೀರು ಗೊಬ್ಬರಗಳನ್ನು ಪಡೆದು ನಿನ್ನ ಕನಸನ್ನು ನನಸಾಗಿಸುತ್ತವೆ. ಗಿಡಕ್ಕೆ ಸಂತೋಷವಾಯಿತು ಇದ್ದಷ್ಟು ಕಾಲ ಸಂಭ್ರಮದಿಂದ ಬದುಕುವುದನ್ನು ನಿರ್ಧರಿಸಿಬಿಟ್ಟಿತ್ತು. ಅದರ ಬೀಜಗಳು ಸೂಕ್ತ ನೆಲದಲ್ಲಿ ಬಿದ್ದು ಸಕಾಲದಲ್ಲಿ ನೀರು ಗೊಬ್ಬರ ಪಡೆದು ಸೊಂಪಾಗಿ ಬೆಳೆದು ನಿಂತಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!