ಇವತ್ತು ಅಪ್ಪ ಕಿವಿ ಹಿಡಿದು ಗಟ್ಟಿಯಾಗಿ ಗದರಿಸೋದಕ್ಕೆ ಪ್ರಾರಂಭ ಮಾಡಿದರು. ಯಾಕೆ ಈ ಬೈಗುಳ ನನಗೆ ಸಿಕ್ತಾ ಇದೆ ಅನ್ನೋದು ಅರ್ಥ ಆಗ್ಲಿಲ್ಲ. ಅವರು ಬೈದದ್ದು ಇಷ್ಟೇ, ನೀನು ಗಿಡಕ್ಕೆ ನೀರು ಹಾಕುವಾಗ ಅದರ ಬುಡಕ್ಕೆ ಸರಿಯಾಗಿ ನೀರು ಹಾಕಬೇಕು ಹಾಗಾದಾಗ ಅದರ ರೆಂಬೆ ಕೊಂಬೆಗಳು ಚಂದ ಚಿಗುರಿಕೊಳ್ಳುತ್ತವೆ. ನಿನಗೆ ರೆಂಬೆ ಕೊಂಬೆಗಳು ಚಂದ ಕಾಣಬೇಕು ಅನ್ನೋ ಕಾರಣಕ್ಕೆ ರೆಂಬೆಗಳಿಗೆ ನೀರು ಹಿಡಿದರೆ ಸಾಕಾಗುವುದಿಲ್ಲ. ಬುಡವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿಯೋ, ಆಗ ರಂಬೆ ಕೊಂಬೆಗಳು ಅದ್ಭುತವಾಗಿರುತ್ತದೆ. ಅಪ್ಪ ಇಷ್ಟು ಹೇಳಿ ಮುಂದೆ ಹೋದರು. ಅವರು ಕಿವಿ ಹಿಂಡಿದ್ದ ನೋವು ಹಾಗೆ ಇತ್ತು. ಅವರು ಹೇಳಿದ್ದನ್ನ ಮತ್ತೆ ಮತ್ತೆ ಯೋಚಿಸಿದೆ. ನನ್ನಿಂದ ಏನೋ ತಪ್ಪಾಗಿದೆ. ಕನಸಿಗೆ ಪೂರಕವಾದ ಕೆಲಸ ಮಾಡುವುದನ್ನು ಬಿಟ್ಟು ಸುಮ್ಮನೆ ಏನೋ ಒಂದು ಕೆಲಸವನ್ನು ನಿರ್ವಹಿಸುತ್ತಿದ್ದೇನೆ ,ಅದನ್ನು ಗಮನಿಸಿ ಅಪ್ಪ ಹೀಗಂದಿದ್ದಾರೆ ಅನ್ನೋದು ಅರ್ಥವಾಯಿತು. ಹಾಗಾಗಿ ಬುಡಕ್ಕೆ ನೀರು ಹಾಕಿದ್ರೆ ಮಾತ್ರ ರೆಂಬೆ ಕೊಂಬೆಗಳು ಚೆನ್ನಾಗಿರುತ್ತವೆ ಅನ್ನೋದನ್ನ ಅರ್ಥ ಮಾಡಿಕೊಂಡೆ ನಿಮಗೆ ಬೇರೆ ಏನಾದರೂ ಅರ್ಥವಾಗಿದ್ದರೆ ತಿಳಿಸಿಬಿಡಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!