ನಿನಗೆ ಅರ್ಥವಾಗಬೇಕು ನಿರ್ಧಾರ ತೆಗೆದುಕೊಳ್ಳುವಾಗ ನೂರು ಸಲ ಯೋಚನೆ ಮಾಡಿ ನಿರ್ಧಾರ ತೆಗೆದುಕೋ ಅಂತ ಹಲವು ಬಾರಿ ಹೇಳಿದ್ದೇನೆ, ನೀನು ಅದನ್ನು ಒಮ್ಮೆಯೂ ಕೇಳಿಸಿಕೊಂಡಿಲ್ಲ. ನಿರ್ಧಾರ ತೆಗೆದುಕೊಳ್ಳುವುದು ದೊಡ್ಡದಲ್ಲ ಅದಾದ ಮೇಲೆ ಅದರಿಂದ ಆಗುವ ಸಮಸ್ಯೆಗಳು ಎಷ್ಟು ಅನ್ನೋದು ನಿನಗೆ ಇನ್ನೂ ಅರ್ಥವಾಗದಿರುವುದು ವಿಪರ್ಯಾಸ. ಕಾಡಿಗೆ ಬೆಂಕಿ ಬಿದ್ದಾಗ ಆ ಬೆಂಕಿ ತರೆಗೆಲೆಗಳನ್ನು ಮಾತ್ರ ಸುಡುತ್ತೇನೆ ದೊಡ್ಡ ದೊಡ್ಡ ಮರಗಳನ್ನು ಸುಡುವುದಿಲ್ಲ ಸಣ್ಣ ಮರಗಳನ್ನ ಮಾತ್ರ ಭಸ್ಮ ಮಾಡಿ ಹಾಕ್ತಾನೆ ಅಂತ ಆಯ್ಕೆಯನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬೆಂಕಿಯೆಂದ ಮೇಲೆ ಎಲ್ಲವೂ ಸುಟ್ಟು ಬೂದಿಯಾಗಲೇಬೇಕು. ತಪ್ಪು ಒಂದು ಸಣ್ಣ ಕಿಡಿಯದದ್ದಾರೂ ಆ ಕಿಡಿಯಿಂದಾಗಿ ಇಡೀ ಕಾಡೆ ಭಸ್ಮವಾಗಿ ಬಿಡುತ್ತದೆ. ತಪ್ಪೇ ಮಾಡದ ದೊಡ್ಡ ದೊಡ್ಡ ಮರಗಳು ಪ್ರಾಣಿ-ಪಕ್ಷಿಗಳು ಬಲಿಯಾಗುತ್ತವೆ. ಹಾಗೆ ನಿನಗೆ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರದಲ್ಲಿ ನಿನ್ನಿಂದ ಪರರ ಬದುಕು ನಾಶವಾಗಬಾರದು. ಖಾರವಾದ ಮಾತುಗಳನ್ನು ಸದಾಶಿವರು ತಮ್ಮ ಮಗ ನಾಗೇಶನಿಗೆ ಹೇಳುತ್ತಿದ್ದರು. ನಾಗೇಶ ತಾನು ತೆಗೆದುಕೊಂಡ ಕೆಲವೊಂದು ನಿರ್ಧಾರಗಳಿಂದ ತನ್ನ ಕುಟುಂಬದ ಗೌರವ ಘನತೆಯನ್ನು ಹಾಳು ಮಾಡಿದ್ದ. ಒಂದಷ್ಟು ಜನರಿಗೆ ನೋವು ತೊಂದರೆ ಆಗುವಂತ ಮಾಡಿಬಿಟ್ಟಿದ್ದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!