ನಾವು ಇರೋದು ನಿಮಗೋಸ್ಕರ. ನಾವ್ಯಾವತ್ತೂ ನಿಮ್ಮ ಏಳಿಗೆಗೆ ತೊಂದರೆ ಕೊಡೋದಿಲ್ಲ. ಇಲ್ಲ ಸರ್ ನಾವು ಸರಕಾರಿ ಶಾಲೆಗಳನ್ನ ಮುಚ್ಚೋದಿಲ್ಲ, ಯಾಕೆಂದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು. ಬಡವರ ಮಕ್ಕಳೂ ಅದ್ಭುತ ಶಿಕ್ಷಣ ಪಡೆದು ಸಮಾಜದಲ್ಲಿ ಹೆಸರು ಮಾಡುವಂತವರಾಗಬೇಕು. ಹೀಗಿರುವಾಗ ನಾವೇಕೆ ಸರಕಾರಿ ಶಾಲೆ ಮುಚ್ಚುತ್ತೇವೆ. ನೀವ್ಯಾರು ಭಯ ಪಡಬೇಡಿ. ನಾವಿದ್ದೇವೆ. ಜೋರು ಕರತಾಡನವಾಯಿತು. ಎಲ್ಲರೂ ಸಂಭ್ರಮದಿಂದ ಅವರವರ ಮನೆಗೆ ಹೊರಟರು. ಪಕ್ಕದೂರಿನ ಸರಕಾರಿ ಶಾಲೆಯ ಅವ್ಯವಸ್ಥೆಯ ಪತ್ರ ಬರೆದ ಶಿಕ್ಷಕರಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಂಚು ಬಿದ್ದಿರುವ, ಗೋಡೆ ಬಿರುಕಿರುವ, ಶೌಚಾಲಯವಿಲ್ಲದ, ಶಿಕ್ಷಕರಿಲ್ಲದ, ಸೌಲಭ್ಯಗಳಿಲ್ಲದ ಶಾಲೆಗಳ ಉಸಿರಾಟ ನಿಲ್ಲುತ್ತಿದೆ. ದೊಡ್ಡದಾದ ಅದ್ಭುತ ಕಟ್ಟಡದೊಳಗೆ ಹೊಸ ಸರಕಾರಿ ಶಾಲೆ ಮಾಡುವ ಕೆಲವೊಂದನ್ನು ಮುಚ್ಚುವ ವರದಿಗೆ ಅಂಕಿತ ಹಾಕುವ ಕೆಲಸ ನಡೆದಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!