ತಪ್ಪನ್ನು ತಪ್ಪು
ಅನ್ನುವುದರಲ್ಲಿ ತಪ್ಪಿಲ್ಲ
ಆದರೆ ತಪ್ಪೇ
ಇಲ್ಲದ ವಿಷಯಗಳಲ್ಲಿ
ತಪ್ಪುಗಳನ್ನು ಹುಡುಕುವ
ನಾಟಕವಾಡಿ
ತಪ್ಪಿದೆಯೆಂದು
ವಾದಿಸುವುದು ಮಹಾ ತಪ್ಪು !
ಹಾಗೆನ್ನುವವರ ಸಂಕುಚಿತ
ಮನೋಭಾವನೆಯನ್ನ
ತೋರಿಸುವುದರ ಜೊತೆಗೆ
ಆ ವಿಷಯಗಳಲ್ಲಿ ತಾನಿನ್ನೂ
ಪರಿಪೂರ್ಣನಲ್ಲವೆಂಬುವುದನ್ನು
ಅದು ತೋರಿಸಿಕೊಡುತ್ತದೆ !
***
ಹುಸಿ
ನಗುವಿನ
ಹಿಂದೆ
ಹಸಿ
ಸು
ಳ್ಳೇ
ಇರು
ತ್ತ
ದೆ !
***
ಸರಿಯಾಗಿ ಬದುಕೆ
ಬಾಳು ಸವಿ ಜೇನಂತೆ
ಸವಿ ಮುಗಿದು ಹೋಯ್ತೆ
ತುರಿಮಣೆ ಹಲ್ಲಂತೆ !
***
ನನ್ನ ಬರಹಗಳೇ
ಶ್ರೇಷ್ಠ
ಅನ್ನುವವರ ಹತ್ತಿರ
ಉಳಿದ ಬರಹಗಾರರು
ಮತ್ತು
ಓದುಗರು ಯಾವತ್ತೂ
ಜಾಗ್ರತೆಯಿಂದ
ಇರಬೇಕು !
***
ಬರೆಬೆರೆ ಸಾಹಿತ್ಯ
ಅರಳುವುದ ನೋಡು
ಸುಮ್ಮನಿರೆ ದುರ್ಗಂಧ
ಹರಡುವುದ ಕಾಣು !
***
ಮನಸಿಟ್ಟು ಬೈಯದಿರು ಅಣ್ಣನಾದವನು
ಕೊಡುವರು ಕೊಡಲಿ ನಿಡಿದಾದ ಕೈಯನು
ಜೀವನವೇ ಹೀಗೆ ಅರಿತಿರುವ ಕಾರಣ
ಭಾವನೆಗಳ ಅದುಮಿಟ್ಟು ಮುಂದೆ ಹೋದೆನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!