ನೀವು ಬರೆದ

ಕವನವ ಓದಲು

ಕಷ್ಟವೆನಗೆ !

ನಾನು ಬರೆದ

ಕವನವ ಓದಲು

ಕಷ್ಟ ನಿಮಗೆ!

ಕಾರಣ ಬಿಡಿ

ನೀವು ನನಗಿದ್ದರೆ

ನಾ ನಿಮಗಿಹೆ !

*

ನಿನಗಿರದ ನನ್ನ 

ಬಗೆಗಿನ ನೆನೆಪು

ನನಗೇಕೆ ಗೆಳತಿ

ನಿನ್ನೊಡಲ ಕುರಿತು 

*

ಪ್ರಕೃತಿಯನು ವಿಕೃತಿ

ಮಾಡಿದವರು 

ನಾವೇ !

ಸಂಸ್ಕೃತಿಗಳ ವಿಕೃತಿ

ಮಾಡಿದವರು

ನಾವೇ !

ಮತ್ತೇಕೆ ಬೇರೆಯವರು

ಎನ್ನುವರೋ ?

ನಾ ಅರಿಯೆ !

*

ನಾನು ಯಾರನ್ನು

ನನ್ನಷ್ಟಕ್ಕೇ ನಂಬೆನು

ಸಾವ ದಿನವು !

*

ಕಲ್ಲಿಗೂ ಜೀವ

ಬರುತ್ತದೆ ನೋಡಯ್ಯಾ

ಬಿಸಿಯಾದಾಗ !

*

ಉಟ್ಟ ಬಟ್ಟೆಗೆ

ಇರುವ ಬೆಲೆಯಿಂದು

ಮನುಜಗಿಲ್ಲ !

*

ರಸ್ತೆಯಲ್ಲಿಯೆ

ಉಗಿಯುತ್ತಾರೆ ಜನ

ತಾಂಬೂಲವನ್ನು !

*

ಕಷ್ಟದಲ್ಲಿಹ

ಜನರಿಗೆ ಸ್ಪಂಧಿಸಿ

ಜಾಣರಾಗಿರಿ !

*

ಎರಡೂ ಹನಿಗಳೆ

ಎಲೆಯ ಮೇಲಿನವು

ಮುತ್ತುಗಳು !

ಬೇಲಿಯ  ಮೇಲಿನವು

ಮುಳ್ಳುಗಳು !

*

ಇಂದಿನ ದಿನಗಳಲ್ಲಿ 

ಐದು ವರುಷದ

ಮಗುವಿನಲ್ಲಿರುವ

ಜ್ಞಾನದ ಮುಂದೆ 

ಹಿರಿಯರಾದ ನಾವು 

ತೀರಾ ಕುಬ್ಜರಾಗಿ 

ಕಾಣುತ್ತಿದ್ದೇವೆ! 

ಈ ಅಂತರದಿಂದಲೇ

ಅವರ ಮತ್ತು 

ನಮ್ಮ ಸಂಬಂಧಕ್ಕೆ 

ಚ್ಯುತಿ ಬಂದಿದೆ !!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ