ಬಾನು ಮಳೆಯನು ಸುರಿಸೆ

ಪ್ರಕೃತಿ ತಾನ್ ನಲಿದಂತೆ 

ನಮ್ಮ ಕರ್ಮ ಭೂಮಿ ನಲಿಯುತಿರಲಿ 

ಧರ್ಮ ಕರ್ಮದ ನಡುವೆ 

ಬೇಧ ಭಾವವು ಬರದೆ 

ನಾವೆಲ್ಲ ಒಂದೆನುತ ಹಾಡುತಿರಲಿ 

 

ವೇದ ಸಾರುವ ನೆಲದಿ

ಕಲಿತು ಬಾಳಲಿ ಬೆಸೆದು 

ತಾಯ್ ನೆಲಕೆ ನಮಿಸುತಲಿ ಮುಂದೆ ಬಾಗಿ 

ಹಿರಿಯರಿಗೆ ನಮಿಸುತಲಿ

ಕಿರಿಯರನು ಪ್ರೀತಿಸುತಲಿ 

ಕೈಹಿಡಿದು ಹರುಷದಲಿ ಮುಂದೆ ಸಾಗಿ 

 

ದ್ವೇಷ ರೋಷವ ಮರೆತು 

ಎಲ್ಲರೊಳು ಬೆರೆಯುತಲಿ

ಧರ್ಮದೇಳಿಗೆಯ ಜೊತೆ ನಾವು ಬಾಳಿ

ಪ್ರತಿಯೊಂದು ಜೀವದೊಳು 

ಪ್ರತಿರೂಪ ಕಾಣುತಲಿ 

ದೇಶದೇಳಿಗೆಯ ಕಡೆಗೆ ನಡೆವ ಹೇಳಿ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ