ಏರು ಯೌವನ
ಕಡಲ ಚುಂಬನ
ಕಾಂತಿ ಹೊಮ್ಮುವ ಸುಮವನ
ಹೀಗೆ ಬಂದಿಹ
ಚೈತ್ರ ಚಂದನ
ತನುವ ಮನದಲಿ ಹೂಮನ
ಗೆಲುವಿನೊಳಗಣ
ಮಧುವ ಹೂಬನ
ಜೀವ ಭಾವನ ತಾನನ
ಬಯಕೆ ಮೂಡಣ
ಸೃಷ್ಠಿ ಚೇತನ
ಬಾಳ ಲತೆಯಲಿ ಸಿಂಚನ
ನೋವ ಮರೆಯುತ
ಮಧುರ ಚಿಂತನ
ಬದುಕಿನಾಚೆಗೆ ಹೊಸತನ
ಹುರುಪಿನಾಳದ
ಚೆಲುವ ಬಂಧನ
ಗೆಲುವಿನೊಳಗಡೆ ಸಿಹಿತನ
ಒಲವಿನಾಳದ
ಜೇನ ಸವಿಯ
ಸವಿದು ಸಾಗಲು ಪಾವನ
ಸೊಬಗ ಸನಿಹದಿ
ಪ್ರೀತಿ ಸಿರಿತನ
ಯಶದ ಬೆಸುಗೆಗೆ ತನನನ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!