ನಿನ್ನ ಸನಿಹ ಬಂದೆನೆಂದು

ನಿನಗೆ ಸೇಲೆಯೆ 

ನೀನು ಇಲ್ಲದಿರಲು ನಾನು 

ಇಲ್ಲೆ ಇರುವೆನೆ 

 

ಬಳುಕಿಕೊಂಡು ನಡೆದೆ ನೀನು

ಬಳಿಗೆ ಬಂದೆನೆ

ಸೊಂಟ ತಿರುಗಿ ನಡುವು ಕುಣಿಯೆ 

ಸೋತು ಹೋದೆನೆ

 

ಬಾನಿನಲ್ಲಿ ತುಂಟ ಚಂದ್ರ

ನಗುತ ನಿಂತನೆ 

ನಿನ್ನ ಮೊಗಕೆ ಬೆಳಕನಿತ್ತು 

ಖುಷಿಯ ಪಟ್ಟನೆ 

 

ಕೈಯ ಹಿಡಿಯೆ ನಾಚಿ ನೀನು 

ನಿಂತು ನಕ್ಕೆಯೆ 

ಮನೆಯ ತುಂಬ ಬಳೆಯ ಸದ್ದು 

ಕೇಳಿ ನಲಿದೆನೆ

 

ವರುಷವೊಂದು ಕಳೆಯಲೀಗ 

ನಗುವ ಕಂದನೆ 

ನನ್ನ ಚೆಲುವೆ,ಬಾಳ ಜೊತೆಗೆ 

ಸುಖವ ಕಂಡೆನೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ