ತೆಂಗಿನ ಎಣ್ಣೆಯನ್ನು ಸರಿಯಾಗಿ ಬಳಸಿದರೆ ಅದರ ಪ್ರಯೋಜನಗಳು ಇನ್ನಷ್ಟು ಹೆಚ್ಚಾಗುತ್ತವೆ. ಕೆಲವು ಸರಳ ವಿಧಾನಗಳು...

ಮಸಾಜ್: ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆಚ್ಚಗೆ ಮಾಡಿ, ತಲೆಯ ಚರ್ಮಕ್ಕೆ ಮತ್ತು ಕೂದಲಿಗೆ ಮಸಾಜ್ ಮಾಡಿ. ೩೦ ನಿಮಿಷಗಳಿಂದ ಒಂದು ಗಂಟೆಯವರೆಗೆ ಬಿಟ್ಟು, ನಂತರ ಶಾಂಪೂ ಬಳಸಿ. ಇನ್ನು ರಾತ್ರಿಯಿಡೀ ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚಿ ಬೆಳಿಗ್ಗೆ ತೊಳೆಯಿರಿ. ಇದು ಆಳವಾದ ಪೋಷಣೆಯನ್ನು ಒದಗಿಸುತ್ತದೆ. ತೆಂಗಿನ ಎಣ್ಣೆಯೊಂದಿಗೆ ಜೇನುತುಪ್ಪ, ಆಲೆವೆರಾ, ಅಥವಾ ಮೊಸರನ್ನು ಮಿತ್ರಣ ಮಾಡಿ ಹಚ್ಚಿದರೆ ಕೂದಲಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಶಾಂಪೂ ನಂತರ ತೆಂಗಿನ ಎಣ್ಣೆಯನ್ನು ಕೂದಲಿನ ತುದಿಗಳಿಗೆ ಹಚ್ಚಿ, ಕೆಲವು ನಿಮಿಷಗಳ ನಂತರ ತೊಳೆಯಿರಿ.

ವೈಜ್ಞಾನಿಕ ಅಧ್ಯಯನಗಳು- ತೆಂಗಿನ ಎಣ್ಣೆಯ ಕೂದಲಿನ ಆರೈಕೆಯ ಗುಣಗಳ ಬಗ್ಗೆ ಹಲವಾರು ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ೨೦೦೩ರಲ್ಲಿ ಪ್ರಕಟವಾದ ಒಂದು ಅಧ್ಯಯನವು ತೆಂಗಿನ ಎಣ್ಣೆಯು ಕೂದಲಿನ ಪೋಟೀನ್ ಕಳೆದುಕೊಳ್ಳುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಈ ಅಧ್ಯಯನದ ಪ್ರಕಾರ, ತೆಂಗಿನ ಎಣ್ಣೆಯ ಲಾರಿಕ್ ಆಮ್ಲವು ಕೂದಲಿನ ತೂತುಗಳಿಗೆ ಆಳವಾಗಿ ತೂರಿಕೊಂಡು ಕೂದಲಿನ ಸಂರಚನೆಯನ್ನು ರಕ್ಷಿಸುತ್ತದೆ. ಈ ಅಧ್ಯಯನವು ತೆಂಗಿನ ಎಣ್ಣೆಯನ್ನು ಖನಿಜ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯೊಂದಿಗೆ ಹೋಲಿಕೆ ಮಾಡಿದಾಗ, ತೆಂಗಿನ ಎಣ್ಣೆಯು ಕೂದಲಿನ ಹಾನಿಯನ್ನು ತಡೆಗಟ್ಟುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಡುಕೊಂಡಿದೆ. ಇದರ ಜೊತೆಗೆ, ೨೦೧೫ರಲ್ಲಿ ಪ್ರಕಟವಾದ ಒಂದು ಲೇಖನವು ತೆಂಗಿನ ಎಣ್ಣೆಯ ಆಂಟಿ ಮೈಕ್ರೋಬಿಯಲ್ ಗುಣಗಳು ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

ಎಚ್ಚರಿಕೆಯ ವಿಷಯಗಳು: ಗುಣಮಟ್ಟದ ಎಣ್ಣೆ ಶುದ್ಧ, ಸಾವಯವ ತೆಂಗಿನ ಎಣ್ಣೆಯನ್ನು ಬಳಸಿ. ಏಕೆಂದರೆ ರಾಸಾಯನಿಕ ಸಂಸ್ಕರಣೆಗೊಳಗಾದ ಎಣ್ಣೆಯು ಕಡಿಮೆ  ಪರಿಣಾಮಕಾರಿಯಾಗಿರುತ್ತದೆ. ತೆಂಗಿನ ಏಣ್ಣೆಯನ್ನು ಅತಿಯಾಗಿ ಬಳಸದಿರಿ: ತೆಂಗಿನ ಎಣ್ಣೆಯನ್ನು ಅತಿಯಾಗಿ ಬಳಸಿದರೆ ತಲೆಯ ಚರ್ಮದಲ್ಲಿ ಎಣ್ಣೆಯ ಪ್ರಮಾಣ ಹೆಚ್ಚಾಗಬಹುದು.

ಅಲರ್ಜಿ ಪರೀಕ್ಷೆ: ತೆಂಗಿನ ಎಣ್ಣೆಯನ್ನು ಮೊದಲ ಬಾರಿಗೆ ಬಳಸುವ ಮೊದಲು, ಚರ್ಮದ ಸಣ್ಣ ಭಾಗದಲ್ಲಿ ಪರೀಕ್ಷಿಸಿ, ಅಲರ್ಜಿಯ ಸಾಧ್ಯತೆ ಇದೆಯೇ ಎಂದು ಹುಚಿತಪಡಿಸಿಕೊಳ್ಳಿ. ತೆಂಗಿನ ಎಣ್ಣೆಯು ಕೂದಲಿನ ಆರೈಕೆಗೆ ಒಂದು ನೈಸರ್ಗಿಕ, ಪರಿಣಾಮಕಾರಿ, ಮತ್ತು ಕೈಗೆಟಕುವ ಆಯ್ಕೆಯಾಗಿದೆ ಇದರ ಪೌಷ್ಟಿಕ ಗುಣಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರಿಂದ ಹಿಡಿದು, ತಲೆಹೊಟ್ಟು ಮತ್ತು ಕೂದಲಿನ ಹಾನಿಯನ್ನು ತಡೆಗಟ್ಟುವವರೆಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ವೈಜ್ಞಾನಿಕ ಅಧ್ಯಯನಗಳು ಇದರ ಪರಿಣಾಮಕಾರಿತ್ವವನ್ನು ದೃಢಪಡಿಸಿವೆ. ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಇದರ ಬಳಕೆಯು ಶತಮಾನಗಳಿಂದ ಚಾಲ್ತಿಯಲ್ಲಿದೆ. ಆದ್ದರಿಂದ, ತೆಂಗಿನ ಎಣ್ಣೆಯನ್ನು ನಿಮ್ಮ ಕೂದಲಿನ ಆರೈಕೆಯ ದಿನಚರಿಯ ಭಾಗವನ್ನಾಗಿ ಮಾಡಿಕೊಂಡು, ಆರೋಗ್ಯಕರ ಮತ್ತು ಹೊಳೆಯುವ ಕೂದಲನ್ನು ಪಡೆಯಿರಿ.

(ಮುಗಿಯಿತು) (ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ