ತುರುಬ ತುಂಬ ಹೂವ ಮುಡಿದು ಎತ್ತ ಸರಿದೆ ನಲ್ಲೆ
ನಾಟ್ಯದಂತೆ ನಡೆಯೆ ನೀನು ಗಮನ ಸೆಳೆದೆ ನಲ್ಲೆ
ಕಿರಣಕರಳಿ ನಿಂತ ನಿನಗೆ ಮೋಹದೊಳಗೆ ಸೊಕ್ಕೆ
ಮಧುವನೆಲ್ಲ ಮನಸಿನಲ್ಲೆ ಹೀರಿ ನಲಿದೆ ನಲ್ಲೆ
ಎಲ್ಲೊ ಕೂತು ನನ್ನ ನೋಡಿ ಮನದಿ ನಕ್ಕಯೇಕೆ
ಕದ್ದು ಮುಚ್ಚಿ ಬಂದ ಗಳಿಗೆ ತಬ್ಬಿ ಹಿಡಿದೆ ನಲ್ಲೆ
ಚಿತ್ರ ಸೊಬಗು ಸುತ್ತ ಮುತ್ತ ಸವಿಯ ಹರಡೆ ನಲಿವು
ಕಳ್ಳ ಬೆಕ್ಕಿನಂತೆ ಸೆರಗ ಹಿಡಿದು ಎಳೆದೆ ನಲ್ಲೆ
ಇರುಳು ಕಳೆಯೆ ಹೊತ್ತು ಮೂಡೆ ಎಲ್ಲಿ ಇಹನು ಈಶಾ
ಬಾನ ಕಿರಣ ಚೆಲ್ಲೆ ಬುವಿಗೆ ಬಾಡಿ ಹೋದೆ ನಲ್ಲೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!