ಸಾಲುಮರದ ಕಕ್ಕೇನಹಳ್ಳಿ ತಿಮ್ಮಕ್ಕ
ಗುಬ್ಬಿ ತಾಲೂಕಿನ ಮರಗಳ ತಾಯಕ್ಕ
ತುಮಕೂರಿನ ಜನರು ನೆನೆಸುವರಕ್ಕ
ನಾಡಿನ ಜನತೆಗೆ ಸದಾ ಪ್ರೇರಣೆ ನೀನಕ್ಕ.
ದೇಶದ ತುಂಬೆಲ್ಲ ವೃಕ್ಷಮಾತೆ ಹೆಸರು
ಪರಿಸರವೆಲ್ಲ ಹೆಪ್ಪುಗಟ್ಟಿದ ಮೊಸರು
ಸಾಲು ಸಾಲು ಮರಗಳಲಿ ಹಸಿರು
ರೆಂಬೆ ಕೊಂಬೆಗಳಲಿ ನವಿರ ಉಸಿರು.
ಬಡತನದಲ್ಲಿ ಹುಟ್ಟಿ ಬೆಳೆದು ಅರಳಿದೆ
ಸಾಮಾಜಿಕ ಕಳಕಳಿಯ ನಿಜ ಬೆರಳಿದೆ
ಓದದಿದ್ದರೂ ಸದಾ ಸಾಧನೆಗೆ ಹೊರಳಿದೆ
ಪ್ರಶಸ್ತಿ ಪುರಸ್ಕಾರಗಳ ಒಲಿದ ಕೊರಳಿದೆ.
ಸಂತಾನವಿಲ್ಲದ ಕೊರಗು ಗಿಡಗಳಲ್ಲಿ ಕಂಡೆ
ನೀರು ಹಾಕಿ ಬೆಳೆಸುವುದರಲ್ಲಿ ಸವಿ ಉಂಡೆ
ಸಾವಿರ ಸಾವಿರ ಗಿಡಗಳ ನೆಟ್ಟೆ ರಸ್ತೆಯ ದಂಡೆ
ಹೊತ್ತು ಹೊತ್ತು ಕೊಡಗಳ ದಣಿಯಿತು ಮಂಡೆ.
114 ವರ್ಷಗಳ ಸಾರ್ಥಕ ಬದುಕು ಬದುಕಿದೆ
ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸಿದೆ
ಪುರಸ್ಕಾರದ ಧನವನ್ನು ಬಡವರಿಗೆ ಹಂಚಿದೆ
ಅಹಂ ದೂರವಿರಿಸಿ ಆದರ್ಶ ಮಾದರಿ ಎನಿಸಿದೆ.
-ಜಯಶ್ರೀ ಭ. ಭಂಡಾರಿ, ಬಾದಾಮಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!