ಹಕ್ಕಿಗೆ ಆಕಾಶದಲ್ಲಿ ಹಾರೋ ಆಸೆ. ತುಂಬಾ ಎತ್ತರಕ್ಕೆ ಏರಬೇಕು, ಸ್ವಚ್ಛಂದವಾಗಿ ಹಾರಬೇಕು, ಅಂದುಕೊಂಡದ್ದನ್ನ ಸಾಧಿಸಬೇಕು, ಹೀಗೆ ಕನಸುಗಳನ್ನು ಕಟ್ಟಿಕೊಂಡಿತ್ತು. ಆದರೆ ಗೂಡಿನಿಂದ ಹೊರಗೆ ಚಲಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ. ಇಷ್ಟು ದಿನ ಗೂಡಿನೊಳಗೆ ತಂದು ಆಹಾರ ನೀಡ್ತಾ ಇದ್ದವರು ಮಾತು ಮೀರುವ ಹಾಗಿರಲಿಲ್ಲ. ಜೊತೆಗೆ ತಾನು ಸ್ವಂತ ಸಂಪಾದನೆ ಮಾಡುವವರೆಗೂ ಹಕ್ಕಿತನ್ನ ಮನೆಯವರನ್ನು ಬಿಟ್ಟು ಹೊರಡಲಿಲ್ಲ,ಸ್ವಂತ ಸಂಪಾದನೆಯಿಂದ ಬದುಕುವುದಕ್ಕೆ ಆರಂಭ ಮಾಡಿದಾಗ ಗೂಡಿನೊಳಗಿನ ಉಳಿದ ಹಕ್ಕಿಗಳು ಹಕ್ಕಿ ಮತ್ತೆ ಗೂಡನ್ನೇ ಆಶ್ರಯಿಸಬೇಕು ಗೂಡಿನೊಳಗೆ ಬದುಕು ಕಟ್ಟಿಕೊಳ್ಳಬೇಕು ,ನಾವು ಹೇಳಿದಂತೆ ಬದುಕಬೇಕು ಹೀಗೆ ವಿಚಾರಗಳನ್ನು ತುಂಬಿದ್ದರು. ರೆಕ್ಕೆ ನಿನ್ನದು ಆಕಾಶ ವಿಶಾಲವಾಗಿದೆ ಯಾವುದೇ ಬದುಕಿನ ದುರಲೋಚನೆ ಇಲ್ಲದೆ ನೆಮ್ಮದಿಯಾಗಿ ಬದುಕುತ್ತೇನೆ ಅನ್ನುವ ಆಸೆಯನ್ನು ಕಟ್ಟಿಕೊಂಡು ತುಂಬ ದೂರ ತುಂಬ ಎತ್ತರದಲ್ಲಿ ಹಾರಿತು .ಅವತ್ತು ಬದುಕಿನ ವಿಶಾಲತೆ ಅರ್ಥವಾಯಿತು. ಉಳಿದ ಹಕ್ಕಿಗಳಿಗೆ ಅದನ್ನೇ ಹೇಳಿದ್ದು ನಿಮ್ಮ ರೆಕ್ಕೆ ಬಲಿತು ಗಟ್ಟಿಯಾಗಿ ಎಷ್ಟೇ ದೂರದವರೆಗೆ ಹಾರುತ್ತೇನೆ ಅನ್ನುವ ಸಾಮರ್ಥ್ಯ ಸಿಕ್ಕಿದ ಮೇಲೆ ಆಗಸದಲ್ಲಿ ಹಾರಿಬಿಡಿ. ಹೊಸ ಜಗತ್ತಿನ ಪರಿಚಯ ಮಾಡಿಕೊಳ್ಳಿ ನಿಮ್ಮ ಜೊತೆಗೆ ಇನ್ನೊಂದಷ್ಟು ಹಕ್ಕಿಗಳಿಗೆ ದಾರಿ ತೋರಿಸಿ ಗೂಡಿನೊಳಗೆ ಬಂದಿಯಾಗಿದ್ದು ಅದೇ ಪ್ರಪಂಚ ಅಂದುಕೊಳ್ಳಬೇಡಿ. ಈ ಹಕ್ಕಿಯಿಂದ ಹಲವು ಹಕ್ಕಿಗಳ ಬದುಕುವ ರೂಪ ಬದುಕಿನ ರೂಪ ಬದಲಾಯಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ