ಭಗವಂತ ಕಾಯುತ್ತಿದ್ದ, ದಿನಕ್ಕಾಗಿ. ಅವನು ಕೇಳಿಕೊಂಡಿದ್ದ ಪ್ರತೀ ದಿನವೂ ಭಗವಂತನಲ್ಲಿ. ದೇವಾ ಒಮ್ಮೆ ಕಣ್ತೆರೆದು ನೋಡು ಪ್ರತಿದಿನವೂ ಕಷ್ಟಪಟ್ಟು ಎಲ್ಲಾ ದಾರಿಗಳನ್ನು ಹುಡುಕಿದ್ದೇನೆ ಎಲ್ಲ ದಾರಿಗಳು ಒಂದಿಷ್ಟು ದೂರದವರೆಗೆ ಕರೆದುಕೊಂಡು ಹೋಗಿ ಅಲ್ಲಿ ನಿಲ್ಲಿಸಿ ಬಿಟ್ಟಿದ್ದಾವೆ. ಮುಂದೇನು? ಅನ್ನುವ ಪ್ರಶ್ನೆಗೆ ಉತ್ತರ ಸಿಗದೇ ಮೌನವಾಗಿದ್ದೇನೆ. ಹೊಸತೊಂದು ಬೆಳಕನ್ನು ತೋರಿಸು ಎಂದು ಬೇಡುವನು. ಪ್ರತಿದಿನವೂ ಹೊಸ ಹೊಸ ಮಾರ್ಗದ ಪ್ರಯತ್ನವನ್ನ ಪಡ್ತಾನೆ ಇದ್ದ. ಪ್ರಯತ್ನಗಳು ಜಾರಿಯಲ್ಲಿದ್ದು ಅದ್ಭುತ ಯಾವಾಗ ಘಟಿಸುತ್ತೇ  ಅನ್ನೋದು ಅವನಿಗೂ ಅರಿವಿರಲಿಲ್ಲ. ಭಗವಂತ ಒಮ್ಮೆ ಕಣ್ಣ ತೆರೆದು ನಕ್ಕು ಬಿಟ್ಟಿದ್ದ. ಆ ದಿನ ಆತನ ಜೀವನದಲ್ಲಿ ಘಟಿಸಿಯೇ ಬಿಟ್ಟಿತು. ದೊಡ್ಡದೊಂದು ಸ್ಪರ್ಧೆ ಹಲವಾರು ಸ್ಪರ್ಧಿಗಳು ಆತನೊಂದಿಗೆ ಸ್ಪರ್ಧೆಗೆ ಕಾಯುತ್ತಿದ್ದರು.  ಆತನ ಹಲವು ವರ್ಷಗಳ ಜೀವನದ ಪರಿಶ್ರಮಕ್ಕೆ ಈ ವೇದಿಕೆ ಬಹುಮಾನ ರೂಪವಾಗಿ ಸಿಕ್ಕಿತು. ಜನರನ್ನ ಸಂಭ್ರಮದಿಂದ ನಗಿಸಿದ ಕಾರಣಕ್ಕೆ ಬಹುಮಾನದ ಮೊತ್ತ ಆತನೊಂದಿಗಿತ್ತು. ಕಣ್ಣಂಚಲ್ಲಿ ಕಣ್ಣೀರು ಇಷ್ಟು ದಿನದ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲಕ್ಕಾಗಿ ಒಮ್ಮೆ ಭೂಮಿಯನ್ನು ಸ್ಪರ್ಶಿಸಿತು. ಆತನ ಪರಿಶ್ರಮಕ್ಕೆ ಬೆಲೆ ಆ ದಿನ ಸಿಕ್ಕಿತು. ಇಡೀ ಜೀವನದಲ್ಲಿ ಅನುಭವಿಸಿದ ಎಲ್ಲಾ ಅನುಭವಗಳ ಧಾರೆಯನ್ನ ವೇದಿಕೆಯಲ್ಲಿ ಹರಿಯ ಬಿಟ್ಟಿದ್ದ ಭಗವಂತ ಕಣ್ಣು ತೆರೆದ ಕ್ಷಣಕ್ಕಾಗಿ. ಆತ ಮತ್ತೆ ನಂಬಿಕೆಯಿಂದ ಉಚ್ಚರಿಸಿದ. ಕಾಯಬೇಕು ಭಗವಂತ ಕೊಟ್ಟೇ ಕೊಡುತ್ತಾನೆ. ಆತನ ಕೈಯಲ್ಲಿ ಮೊದಲ ಬಹುಮಾನದ ಪಾರಿತೋಷಕ ಜೊತೆಯಲ್ಲಿ ಸಾಗಿತ್ತು ಮನೆಯವರೆಗೆ...

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ