ದೇವರು ಕಳುಹಿಸಿದ ದೇಹವೆಂಬ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ನಾವುಗಳು ಆ ಬಾಡಿಗೆ ಮನೆಯನ್ನ ಹೇಗೆ ನೋಡಿಕೊಳ್ಳುತ್ತಿದ್ದೇವೆ ? ಭಗವಂತ ತುಂಬಾ ನಂಬಿಕೆ ಇಟ್ಟು ದೇಹವೆಂಬ ಬಾಡಿಗೆ ಮನೆಯನ್ನ ನಮಗೆ ನೀಡಿದ್ದಾನೆ, ನಾವದನ್ನ ಬಳಸಿದ ನಂತರ ಬಿಸಾಡುವ ಹಾಗಿಲ್ಲ. ಮತ್ತೆ ಅದನ್ನ ಹಾಗೆ ಭಗವಂತನಿಗೆ ಅರ್ಪಿಸಬೇಕು ನಮ್ಮ ಬಾಡಿಗೆ ಮನೆಯನ್ನ ಎಷ್ಟು ಸುಂದರವಾಗಿ ನೋಡಿಕೊಳ್ಳುತ್ತೇವೆ ಅಷ್ಟು ಭಗವಂತನಿಗೆ ಪ್ರಿಯವಾಗುತ್ತೆ. ಇಲ್ಲವಾದರೆ ಆತ ಅದಕ್ಕೆ ಯಾವುದೇ ರೀತಿಯ ಫೈನ್ ಗಳನ್ನು ಆದರೂ ಹಾಕಬಹುದು. ಕೆಟ್ಟ ಅಭ್ಯಾಸಗಳು ಕೆಟ್ಟ ಚಟಗಳು, ಕೆಟ್ಟ ಆಲೋಚನೆಗಳು ಆಂತರಿಕವಾಗಿ ದೈಹಿಕವಾಗಿ ಈ ಬಾಡಿಗೆ ಮನೆಯನ್ನ ಸುಂದರಗೊಳಿಸುತ್ತಾ ನೋಡುಗರು ಒಪ್ಪಿತವಾಗುವ ಹಾಗೆ ಬದುಕಬೇಕಾದ ಜವಾಬ್ದಾರಿ ನಮ್ಮದು. ಹಾಗಾದಾಗ ಭಗವಂತನಿಗೂ ಈ ದೇಹವೆಂಬ ಬಾಡಿಗೆ ಮನೆಯನ್ನು ನಮಗೆ ನೀಡಿದ್ದಕ್ಕೆ ನೆಮ್ಮದಿ ಇರುತ್ತದೆ. ಹಾಗಾಗಿ ಜವಾಬ್ದಾರಿ ನಮ್ಮದು ಈ ಬಾಡಿಗೆ ಮನೆಯನ್ನು ತುಂಬಾ ಚೇತನವಾಗಿ ನೋಡಿಕೊಳ್ಳೋಣ. ವೇದಾನಂದರ ಮಾತು ಮನಸ್ಸಿಗೆ ಒಪ್ಪಿತವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!