ಸುದ್ದಿ ಏನಿದೆ? ನರಕಾಸುರ ಸ್ವರ್ಗಾಸುರನಲ್ಲಿ ಕೇಳಿದ. ದೊಡ್ಡದೇನಿಲ್ಲ ಗುರುಗಳೇ, ಯಾರೋ ಮಾಂಸಾಹಾರ ತಿಂದರಂತೆ, ಇನ್ನೆಲ್ಲೋ ಅಧಿಕಾರ ಹಂಚಿಕೆಯಾಗಬೇಕಂತೆ, ಊರು ಬಿಟ್ಟು ಡೆಲ್ಲಿಗೆ ಹೊರಡ್ತಾರಂತೆ, ಜೈಕಾರ ಜೋರಂತೆ, ಉತ್ಸವದಲ್ಲಿ‌ ಜನ ತಮಬಿದ್ದರಂತೆ, ಸೋಲು ಹತ್ತಿರವಾಯಿತಂತೆ, ಭ್ರಷ್ಟಚಾರವಂತೆ, ಮಳೆ ಜೋರಂತೆ ಇಷ್ಟೇ.

ಅಲ್ಲೋ ಯಾವಾಗಲೂ ಇದೇ ಸುದ್ದಿನಾ? ಊರಿನ‌ ರಸ್ತೆ ಹಾಳಾಗಿದೆ, ಅಫಘಾತಗಳು ಹೆಚ್ಚಾಗಿದೆ, ಶಾಲೆಗಳು ಮುಚ್ಚುತ್ತಿವೆ,  ಶಿಕ್ಷಕರು ಗಣತಿಯಲ್ಲಿದ್ದಾರೆ, ವಿಶ್ವವಿದ್ಯಾಲಯದಲ್ಲಿ ಸಂಬಳ ಸಿಗುತ್ತಿಲ್ಲ, ಆರೋಗ್ಯ ದುಬಾರಿಯಾಗಿದೆ, ಇದ್ಯಾವುದು ಯಾಕೆ ಸುದ್ದಿಯಾಗಿಲ್ಲ ಸ್ವರ್ಗರಾಯ. ಗೊತ್ತಿಲ್ಲ ನರಕರಾಯ. ಇಬ್ಬರಲ್ಲೂ ಉತ್ತರವಿಲ್ಲ

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ