ನಿನ್ನಿಂದ ಏನೂ ಆಗೋದಿಲ್ಲ, ಏನೇನೋ ಕನಸುಗಳನ್ನ ಹೆಣೆದಿದ್ದೀಯಾ? ಆದರೆ ಪ್ರಯತ್ನಗಳಿಲ್ಲ, ನಿನ್ನನ್ನ ನಂಬಿ ಬಂದವರು ಏನಾಗಬೇಕು. ಯಾಕೆ ಹೀಗಿದ್ದೀಯಾ? ನಾನಂದುಕೊಂಡವನು ನೀನಲ್ಲ, ನಿನ್ನಿಂದ ಸಾಧ್ಯವೇ ಇಲ್ಲ ಅನ್ನೋದು ನನಗರ್ಥವಾಗಿದೆ. ಬಿಟ್ಟು ಬಿಡು. ನಿನ್ನ ಬದುಕೇ ಇಷ್ಟು. ಅವಳು ಮೌನವಾಗಿಬಿಟ್ಟಳು. ಅವನು ಹೇಳಿದ" ಇದು ನಾನವಳನ್ನ ಇನ್ನೂ ಎತ್ತರಕ್ಕೇರಿಸಲು ಮಾಡುವ ಸ್ಪೂರ್ತಿಯ ಮಾತು. ಇದರಿಂದ ಅವಳು ಬದಲಾಗಿ ಸಾಧಿಸುತ್ತಾಳೆ. ಆದರೆ ಅವಳು ಆಗಿರುವ ಮನಸಿನ ನೋವಿನ ಪರಿಹಾರಕ್ಜೆ ಮುಲಾಮು ಹುಡುಕುತ್ತಿದ್ದಳು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!