ಸುದ್ದಿ ಇಲ್ಲದವರು ಗದ್ದುಗೆ ಏರಿದಂತೆ

ಏರಿದಂತೆ ಕೆಳಗೆ ತಳ್ಳುವವರೆ ಜಾಸ್ತಿ

ಜಾಸ್ತಿ ಗಿಂಬಳ ತಿಂದರೂ ಕಷ್ಟ

ಕಷ್ಟ ಹೇಳುವವರೆ ಇಂದು ತುಂಬಿರಲು

ತುಂಬಿರಲು ಹೊಟ್ಟೆ ಮನ ಬೇಡುವುದಿಲ್ಲ

ಬೇಡುವುದು ದೊಡ್ಡವರಿಂದ ಸಣ್ಣವರವರೆಗೆ ಸಾಮಾನ್ಯ

ಸಾಮಾನ್ಯರು ಅಸಮಾನ್ಯರು ಎಂದರೆ ತಾರತಮ್ಯ

ತಾರತಮ್ಯದ ಜೀವನ ನೋವಿನಾಳದ ಸಾಗರ

ಸಾಗರದ ಬದುಕಿನೊಳಗೆ ಸದಾ ಉಬ್ಬರ

ಉಬ್ಬರದ ಅಲೆಗಳಂತೆ ಸಾಗುವುದು ದಿಟ್ಟ

ದಿಟ್ಟತನದಲಿ ಸಾಗಬೇಕು ನಾವು ಎಂದಿಗೂ

ಎಂದಿಗೂ ಪರಿಸ್ಥಿತಿ ನಿಭಾಯಿಸುವುದ ಕಲಿಯಬೇಕು

ಕಲಿಯಬೇಕು ವಿವಿಧತೆಯಲಿ ಏಕತೆಯ ಬಂಧು

ಬಂಧುಗಳು  ನರಿಗಳಂತೆ ಊಳಿಡ ಬಾರದು

ಬಾರದು ಎಂದಿಗೂ ಹೊಲಸು ವಿಷಯಗಳು

ವಿಷಯಗಳು ಬದುಕಿನಾಳದ ವಿಷವಾಗಬಾರದು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ