ಹಂದಿಗಳನ್ನು ಕೊಳಕೆನ್ನದಿರು
ಅವುಗಳಿಗಿಂತಲೂ ಕೊಳಕರು
ಲೇಖನಿ ಹಿಡಿದಿಹ ಹಲವರು
ತಾವೇ ಮೇಲೆನ್ನುವ ಪುಂಗವರು
*
ನನಗೆ
ಎಲ್ಲದಕ್ಕಿಂತ
ಗೌರವ
ಮುಖ್ಯ
ಎಂದವರ
ಎದುರು
ಮನೆ
ಗೌರಕ್ಕ
ಬಂದರು !
*
ಯಾರಿಹರು ಎನಗೆನುತ ಊರೊಳಗೆ ತಿರುಗದಿರು
ಬೇರೆಯೇ ನಾನೆನುತ ಉಳಿದವರ ತೆಗಳದಿರು
ಕಾರಣವ ಕೇಳದೆಯೆ ಉರಿದುರಿದು ಬೀಳದಿರು
ಜಾರುತಲೆ ಜೀವನವ ದೂರುತಲೆ ಸಾಗದಿರು
ಕಾರುವರು ಅವರೆಂದು ಹುಸಿಮುನಿಸ ತೋರದಿರು
ಹಾರುತಲೆ ಬದುಕದಿರು --- ಛಲವಾದಿಯೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!